ಭಾರತ ಸೇರಿ ಪ್ರಮುಖ ದೇಶಗಳ ಸಾಲದ ಹೊರೆ ಹೆಚ್ಚಲಿದೆ: ಮೂಡೀಸ್‌

0

ಭಾರತವನ್ನೂ ಒಳಗೊಂಡು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಮುಖ ದೇಶಗಳ ಸಾಲದ ಹೊರೆಯು 2021ರ ವೇಳೆಗೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಲಿದೆ ಎಂದು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವೀಸ್‌ ಹೇಳಿದೆ.

ಕೊರೊನಾ ವೈರಸ್‌ನಿಂದಾಗಿ ಆರ್ಥಿಕ ಬೆಳವಣಿಗೆ ಕುಗ್ಗಿದ್ದು, ವಿತ್ತೀಯ ನಿಯಂತ್ರಣವೂ ಕಷ್ಟವಾಗಿದೆ. ಇದರಿಂದ, ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಸಾಲದ ಹೊರೆಯು ಮುಂದಿನ ಕೆಲವು ವರ್ಷಗಳಲ್ಲಿ ಹೆಚ್ಚಾಗಲಿದೆ ಎಂದು ತಿಳಿಸಿದೆ

2021ರ ಅಂತ್ಯದ ವೇಳೆಗೆ ಈ ದೇಶಗಳ ಸಾಲವು ದೇಶದ ಒಟ್ಟಾರೆ ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 10ರಷ್ಟಕ್ಕೆ ಏರಿಕೆಯಾಗಲಿದೆ. ಮುಖ್ಯವಾಗಿ ಭಾರತ, ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಸಾಲದ ಹೊರೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ತಿಳಿಸಿದೆ.

ಕೊರೊನಾದ ತಕ್ಷಣದ ಆಘಾತದಿಂದಾಗಿ ವರಮಾನ ಕೊರತೆ ಎದುರಾಗಿದೆ. ವಿತ್ತೀಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಬೇಡಿಕೆ ಇಳಿಮುಖವಾಗಿರುವುದು ಹಾಗೂ ಉತ್ಪಾದಕತೆ ಕಡಿಮೆ ಆಗಿರುವುದರಿಂದ ಆರ್ಥಿಕ ಬೆಳವಣಿಗೆಯು ಕುಗ್ಗುತ್ತಿದೆ ಎಂದು ವಿಶ್ಲೇಷಣೆ ಮಾಡಿದೆ.

LEAVE A REPLY

Please enter your comment!
Please enter your name here