ಭೀಮಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆ‌!

0

ಭೀಮಾ ನದಿಗೆ ಈಜಲು ತೆರಳಿದ ನಾಲ್ಕು ಮಂದಿ ನಾಪತ್ತೆಯಾದ ಪ್ರಕರಣ ನಗರದ ಹೊರವಲಯದ ಗುರುಸಣಗಿ ಸೇತುವೆ ಬಳಿ ರವಿವಾರ ಸಂಭವಿಸಿದೆ.

ನಾಪತ್ತೆಯಾದವರನ್ನು ಯಾದಗಿರಿಯ ಅಮಾನ್ (16) ಅಯಾನ್ (16) ರೆಹಮಾನ್ (16) ಕಲಬುರಗಿ ಮೂಲದ ರೆಹಮಾನ್ 15 ಎಂದು ತಿಳಿದುಬಂದಿದೆ.

ಐದು ಜನ ಯುವಕರ ತಂಡ ಸೇತುವೆಯ ಬಳಿ ಬಂದು ಅದರಲ್ಲಿ ಎಮ್ ಡಿ ಅಬ್ದುಲ್ ಎಂಬಾತ ನೀರಿಗೆ ಇಳಿಯದೆ ನದಿಯ ಬದಿಯಲ್ಲಿ ನಿಂತಿದ್ದು ಉಳಿದ ನಾಲ್ವರು ಈಜಲು ನೀರಿಗೆ ಇಳಿದಿದ್ದಾರೆ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಎಸ್ ಪಿ ಋಷಿಕೇಶ್ ಸೋನವಣೆ, ಎಡಿಸಿ ಪ್ರಕಾಶ್ ಸಿಂಗ್ ರಾಜಪೂತ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿದ್ದು, ಅಗ್ನಿಶಾಮಕ ದಳದಿಂದ ಶೋಧ ಕಾರ್ಯಚುರುಕುಗೊಂಡಿದೆ.

LEAVE A REPLY

Please enter your comment!
Please enter your name here