ಭೂಮಿಗೆ ಬಂದಿಳಿದ ಮೊದಲ ಆಕಾಶನೌಕೆ ಸಿಬ್ಬಂದಿ : ಈ ದೃಶ್ಯ ಕಣ್ತುಂಬಿಕೊಳ್ಳಿ…!

0

ಭೂಮಿಯತ್ತ ಹೊರಟಿದ್ದ ಅಮೆರಿಕದ ಮೊದಲ ಸಿಬ್ಬಂದಿ ಆಕಾಶನೌಕೆ ಭಾನುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಹೊರಟಿದ್ದ ಸ್ಪೇಸ್ ಎಕ್ಸ್ ಮತ್ತು ನಾಸಾ ಸಂಯೋಜನೆಯ ಕ್ರೀವ್ ಡ್ರ್ಯಾಗನ್ ಕ್ಯಾಪ್ಸೂಲ್ ಯಶಸ್ವಿಯಾಗಿ ಸಮುದ್ರದಲ್ಲಿ ಲ್ಯಾಂಡಿಂಗ್ ಆಗಿದೆ. ಈ ಮೂಲಕ ಅಮೆರಿಕ ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮತ್ತು ಅವರನ್ನು ಮರಳಿ ಕರೆತರುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.

ಈ ಯೋಜನೆಯು ಸ್ಪೇಸ್‌ಎಕ್ಸ್ ಮತ್ತು ನಾಸಾ ಜಂಟಿಯಾಗಿ ನಡೆಸಿದ ಯಶಸ್ವಿ ಕಾರ್ಯಾಚರಣೆ ಆಗಿದೆ.

ಫಾಲ್ಕನ್-9 ನೌಕೆ ಹೊತ್ತು ಸಾಗಿದ್ದ ‘ಕ್ರೀವ್ ಡ್ರ್ಯಾಗನ್ ಕ್ಯಾಪ್ಸೂಲ್’ ಮೇ 30ರಂದು ಅಂತಾರಾಷ್ಟ್ರೀಯ ಬಾಹ್ಯಾಕಾರ ನಿಲ್ದಾಣಕ್ಕೆ ಯಶಸ್ವಿಯಾಗಿ ಲಾಂಚ್ ಆಗಿತ್ತು. ನಾಸಾದ ಗಗನಯಾತ್ರಿಗಳಾದ ರಾಬರ್ಟ್ ಬೆಹ್ನ್ಕೆನ್ ಹಾಗೂ ಡೌಗ್ಲಾಸ್ ಹರ್ಲಿ ಅವರನ್ನು ಹೊತ್ತ ಫಾಲ್ಕನ್ 9 ರಾಕೆಟ್, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿತು.

 

LEAVE A REPLY

Please enter your comment!
Please enter your name here