ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ಭಾರತೀಯ ಕಿಸಾನ್ ಸಂಘದಿಂದ ಕಾಯ್ದೆಯ ನಕಲು ಪ್ರತಿ ಸುಟ್ಟು ಪ್ರತಿಭಟನೆ

0

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ಭಾರತೀಯ ಕಿಸಾನ್ ಸಂಘದಿಂದ ಕಾಯ್ದೆಯ ನಕಲು ಪ್ರತಿ ಸುಟ್ಟು ಪ್ರತಿಭಟನೆ

ಅಥಣಿ : ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ಪಟ್ಟಣದ ಭಾರತಿ ಕಿಸಾನ್ ಸಂಘದ ವತಿಯಿಂದ ಮಿನಿ ವಿಧಾನಸೌಧದ ಬಳಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಕಾಯ್ದೆಯ ನಕಲು ಪ್ರತಿಯನ್ನು ಸುಟ್ಟಿದ್ದಲ್ಲದೇ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು . ಭಾರತಿ ಕಿಸಾನ್ ಸಂಘದ ಉಪಾಧ್ಯಕ್ಷ ಶ್ರೀಶೈಲ ಜನಗೌಡ ಮಾತನಾಡಿ , ರಾಜ್ಯ ಸರ್ಕಾರ 1961 ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿಧೇಯಕ ಸುಗ್ರೀವಾಜ್ಞೆ ಮೂಲಕ ತಂದಿರುವುದು ವಿಪರ್ಯಾಸ ಈ ಕಾಯ್ದೆ ರೈತರಿಗೆ ಮಾರಕವಾಗಿದೆ . ಮುಂದೊಂದು ದಿನ ಕೃಷಿ ಜಮೀನುಗಳಲ್ಲಿ ಕಾರ್ಖಾನೆಗಳು , ಉದ್ಯಮಿಗಳ ಮನೆಗಳು ನಿರ್ಮಾಣವಾಗುತ್ತವೆ . ಇದರಿಂದ ತಿನ್ನಲು ಅನ್ನವಿಲ್ಲದೆ ಪರದಾಡುವ ಸ್ಥಿತಿನಿರ್ಮಾಣವಾಗುತ್ತದೆ . ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು . ತಕ್ಷಣವೇ ಈ ಕಾನೂನು ತಿದ್ದುಪಡಿ ಕೈ ಬಿಡಬೇಕು ಎಂದು ಆಗ್ರಹಿಸಿದರು . ಸಂಘದ ಕಾರ್ಯದರ್ಶಿ ಭರಮು ನಾಯಕ ಮಾತನಾಡಿ , ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಆಘಾತಕಾರಿ ನಿರ್ಧಾರ . ರೈತರು ಮತ್ತು ಕೃಷಿ ಆಧಾರಿತ ಸಮಸ್ತ ಗ್ರಾಮೀಣ , ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಈ ಕ್ರಮದಿಂದ ಕುಸಿದು ಬೀಳುವುದು ಖಚಿತ . ಕೊರೊನಾ ಕಷ್ಟ ಕಾಲದಲ್ಲಿ ಹಳ್ಳಿಗೆ ಬಂದು ಮರುಜೀವನ ಕಂಡುಕೊಳ್ಳುತ್ತಿರುವ ಬಡ ಜನರಿಗೆ ಈ ಹೊಸ ಕಾಯಿದೆ ಮತ್ತೆ ನಗರಗಳಿಗೆ ನೂಕಿದೆ ಎಂದು ತಿಳಿಸಿದರು . ದಶರಥ ನಾಯಿಕ , ಪ್ರಕಾಶ ಪೂಜಾರಿ , ಈರಣ್ಣ ತಂಗಡಿ , ಸಿದ್ದಾರೂಢ ಮಠಪತಿ , ದುಂಡಪ್ಪಾ ಅವಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು .

ವರದಿ : ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here