ಭೋವಿ ಸಮುದಾಯದ ಬಂಧುಗಳೆ ಹೆಚ್ಚಿನ ಸಂಖ್ಯೆಯಲ್ಲಿ ಈ ವಿಷಯವನ್ನು ಹಂಚಿಕೊಂಡ ಸ್ಥಳೀಯವಾಗಿ ಮನವಿಯನ್ನು ಹಾಗೂ ಪತ್ರಿಕಾ ಪ್ರಕಟಣೆಯನ್ನು ನೀಡಿ ಸಾಧ್ಯವಾದರೆ ಪತ್ರಿಕಾ ಗೋಷ್ಠಿಯನ್ನು ಮಾಡಿ.

0

ಭೋವಿ ಸಮುದಾಯದ ಬಂಧುಗಳೆ ಹೆಚ್ಚಿನ ಸಂಖ್ಯೆಯಲ್ಲಿ ಈ ವಿಷಯವನ್ನು ಹಂಚಿಕೊಂಡ ಸ್ಥಳೀಯವಾಗಿ ಮನವಿಯನ್ನು ಹಾಗೂ ಪತ್ರಿಕಾ ಪ್ರಕಟಣೆಯನ್ನು ನೀಡಿ ಸಾಧ್ಯವಾದರೆ ಪತ್ರಿಕಾ ಗೋಷ್ಠಿಯನ್ನು ಮಾಡಿ.

::ಮನವಿ::
ಗೆ
ಮಾನ್ಯ ಜಿಲ್ಲಾಧಿಕಾರಿ/ತಹಶಿಲ್ದಾರರ/ಉಪ ತಹಶಿಲ್ದಾರರ ಸಾಹೇಬರು
ಸಾ||_____
ತಾ||_____
ಜಿ|| _____

(ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ)

ವಿಷಯ: ಕೋಮು ಗಲಭೆ ಸೃಷ್ಟಿಸುವ ಹಿನ್ನೆಲೆಯಲ್ಲಿ ಶಾಸಕರ, ಪೋಲಿಸರ ಹಾಗೂ ಪತ್ರಕರ್ತರ ಮೇಲೆ ದಾಳಿ ಮಾಡಿರುವದು ಖಂಡಸಿ ಹಾಗೂ ಶಾಸಕರಿಗೆ ಸೂಕ್ತ ಭದ್ರತೆ ನೀಡಯ ಬಗ್ಗೆ.

ಮಾನ್ಯರೇ

ಬೆಂಗಳೂರಿನ ಪುಲಕೇಶಿನಗರದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಭೋವಿ(ವಡ್ಡರ) ಸಮಾಜದ ಹಿರಿಯ ಮುಖಂಡರು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತಗಳಿಂದ ಜಯಸಿದ ಜನಪ್ರಿಯ ಶಾಸಕರು ಈಗಿರುವ ೨೨೪ ಶಾಸಕರಲ್ಲಿಯೇ ಅಂತ್ಯಂತ ಕ್ರಿಯಾಶೀಲ ಹಾಗೂ ಸೌಮ್ಯ ಸ್ವಭಾವದ ಶಾಸಕರಾದ ಶ್ರೀ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸದ ಮೇಲೆ ದಾಳಿ ಮಾಡಿ ಸುಟ್ಟಿರುವದು ಹಾಗೂ ಪೊಲೀಸರನ್ನು ಗುರಿಯಾಗಿಸಿಕೊಂಡು ಠಾಣೆಯ ಮೇಲೆ ದಾಳಿಮಾಡಿರುವದು, ಘಟನಾ ಸ್ಥಳಕ್ಕೆ ಹೋಗದಂತೆ ಅಧಿಕಾರಿಗಳು ತಡೆದಿರುವದು ಹಾಗೂ ಸುದ್ದಿಗಾರರ ಮೇಲೆ ಸುದ್ದಿ ಮಾಡದಂತೆ ದುಷ್ಕರ್ಮಿಗಳು ದಾಳಿ ಮಾಡಿರುವುದು ಘಟನೆ ಖಂಡನೀಯವಾಗಿದೆ.

ಒಂದು ಸಮುದಾಯದ ಅವಹೇಳನಕಾರಿ ಪೋಸ್ಟ್ ಮಾಡಿರಿರುವದು ಕೂಡಾ ತಪ್ಪಾದ ವಿಷಯ ಆದರೆ ಇದಕ್ಕಾಗಿ ಕಾನೂನು ರೀತಿಯಲ್ಲಿ, ಶಾಂತಿಯುತವಾಗಿ ಹೋರಾಟ ಮಾಡುವುದನ್ನು ಬಿಟ್ಟು, ದುಷ್ಕರ್ಮಿಗಳು ಕಾನೂನನ್ನು ಕೈಗೆತ್ತಿಕೊಂಡು ಶಾಸಕರ ಮನೆ ಮೇಲೆ ದಾಳಿ ಮಾಡಿ ಮನೆಯನ್ನು ಹಾಗೂ ವಾಹನಗಳು ಸುಟ್ಟಿರುವದು, ಪೊಲೀಸ್ ರನ್ನು ಗುರಿಯಾಗಿಸಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಮೇಲೆ ಕಲ್ಲೆಸೆತ, ಕ್ವಾಟರ್ಸ್ಗಳ ಮೇಲೆ ದಾಳಿ, ವಾಹನಗಳಿಗೆ ಬೆಂಕಿ ಹಚ್ಚಿರುವುದು, ಪೊಲೀಸರ ಮೇಲೆ ಬಾಟಲಿ ಎಸೆದು ಮತ್ತು ಕಲ್ಲುತೂರಾಟ, ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡಿರುವುದು, ಹಾಗೂ ಶಾಸಕರ ಮನೆಯಲ್ಲಿನ ಚಿನ್ನಾಭರಣ, ನಗದು ಹಾಗೂ ಬಟ್ಟೆಗಳನ್ನು ದರೋಡೆ ಮಾಡುವುದಲ್ಲದೇ ಸುದ್ದಿ ಮಾಡಲು ಬಂದ್ ಸುದ್ದಿಗಾರರ ಮೇಲೆ ದಾಳಿ ಮಾಡುವದಲ್ಲದೇ ಇನ್ನೂ ಅನೇಕ ದುಷ್ಕೃತ್ಯಗಳನ್ನು ಎಸಗಿ ಶಾಂತ ಸಮಾಜದಲ್ಲಿ ಪೂರ್ವ ನಿಯೋಜಿತವಾಗಿ ಕೋಮು ಗಲಭೆಯನ್ನು ಸೃಷ್ಟಿಸುವ ಹೀನ ಕೃತ್ಯ ಇದಾಗಿದೆ.

ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಈ ಘಟನೆಗೆ ಕುಮ್ಮಕ್ಕು ನೀಡಿದವರನ್ನು ಹಾಗೂ ಇದರ ಹಿಂದೆ ಎಂತಹ ಪ್ರಭಾವಿ ನಾಯಕರಿದ್ದು ಕೂಡಲೇ ಪತ್ತೆ ಬಂದಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಶಾಸಕರಾದ ಶ್ರೀ ಅಖಂಡ ಶ್ರೀನಿವಾಸಮೂರ್ತಿಯವರಿಗೂ ಹಾಗೂ ಅವರ ಕುಟುಂಬದವರಿಗೂ ಸೂಕ್ತವಾದ ಭಿಗಿ ಭದ್ರತೆ ನೀಡಬೇಕು, ಇದಕ್ಕೆ ಬೆಂಬಲ ನೀಡಿದ ಯಾವುದೇ ಸಂಘಟನೆಗಳಿದ್ದರು ಅವುಗಳನ್ನು ಬ್ಯಾನ್ ಮಾಡಬೇಕು, ಪ್ರಚೋದನಕಾರಿ ಪೋಸ್ಟ್‌ ಮಾಡಿದರ ಬಗ್ಗೆ ಸೂಕ್ತ ತನಿಖೆ ವಹಿಸಿ ಅವರ ಹಿಂದಿರುವವ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಶಾಸಕರ ಹಾಗೂ ಸರ್ಕಾರದ ಹಾನಿಯಾದ ಆಸ್ತಿ-ಪಾಸ್ತಿಯನ್ನು ಗಲಭೆ ಕೊರರಿಂದಲೇ ವಸೂಲಿ ಮಾಡಬೇಕೆಂದು ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೆವೆ.

ಇಂತಿ ನಿಮ್ಮ ವಿಶ್ವಾಸಿಕರು
ಭೋವಿ(ವಡ್ಡರ) ಸಮುದಾಯ ಜಮಖಂಡಿ

ವಿಶೇಷವಾದ ವಿನಂತಿ:

ಎಲ್ಲಾ ನಮ್ಮ ಭೋವಿ ಸಮುದಾಯದ ಬಂಧುಗಳಲ್ಲಿ ವಿನಂತಿಸಿಕೊಳ್ಳುವದೆನೆಂದರೆ ಈ ಮೇಲ್ಕಾಣಿಸದ ಮನವಿಯನ್ನು ನಿಮ್ಮ ಜಿಲ್ಲಾ , ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮನವಿಯನ್ನು ನೀಡಿ ಪತ್ರಿಕಾ ಹೇಳಿಕೆಯನ್ನು ನೀಡಬೇಕೆಂದು ತಮ್ಮಲ್ಲಿ ವಿನಂತಿ.

ಇಂತಿ ನಿಮ್ಮ
ವಿ.ಜಯಕುಮಾರ
ಸಂಸ್ಥಾಪಕ ಅಧ್ಯಕ್ಷರು
ಜಯಕರ್ನಾಟಕ ಭೋವಿ ಯುವ ವೇದಿಕೆ(ರಿ).

LEAVE A REPLY

Please enter your comment!
Please enter your name here