ಭೌತಶಾಸ್ತ್ರದ ನೊಬೆಲ್ ಪ್ರಕಟ; ಪೆನ್ರೋಸ್, ರೀನ್ಹಾರ್ಡ್ ಮತ್ತು ಆಂಡ್ರಿಯಾ ಗೇಜ್ ಗೆ ಗೌರವ

0

2020ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಅಮೆರಿಕದ ಮೂವರು ವಿಜ್ಞಾನಿಗಳು ಈ ಪುರಸ್ಕಾರವನ್ನು ಪಡೆಯಲಿದ್ದಾರೆ. ರೋಜರ್ ಪೆನ್ರೋಸ್, ರೀನ್ಹಾರ್ಡ್ ಗಂಗಲ್ ಮತ್ತು ಆಂಡ್ರಿಯಾ ಗೇಜ್ ಅವರಿಗೆ ನೀಡಲಾಗುವುದು ಎಂಬ ಘೋಷಣೆಯಾಗಿದೆ.

ಆಲ್ಬರ್ಟ್ ಐನ್‌ಸ್ಟೈನ್‌ರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (Albert Einstein’s General Theory of Relativity) ದ ಬಗ್ಗೆ ತಿಳಿಯಲು ಗಣಿತ ವಿಧಾನವನ್ನು ಸಿದ್ಧಪಡಿಸಿದ್ದಕ್ಕಾಗಿ ರೋಜರ್ ಪೆನ್ರೋಸ್‌ಗೆ ಪ್ರಶಸ್ತಿ ನೀಡಲಾಗುವುದು. ಅದೇ ಸಮಯದಲ್ಲಿ, ಕಪ್ಪು ಕುಳಿ ಮತ್ತು ಮೀಲ್ಕಿ ವೇ milky way ರಹಸ್ಯಗಳನ್ನು ವಿವರಿಸಿದ ಗೆಂಗೆಲ್ ಮತ್ತು ಗೇಜ್ ಅವರಿಗೆ ಜಂಟಿಯಾಗಿ ನೊಬೆಲ್ ನೀಡಲಾಗುತ್ತದೆ.

1901ರಿಂದ, 212 ಜನರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ 113 ಬಾರಿ ನೀಡಲಾಗಿದೆ. ಜಾನ್ ಬಾರ್ಡೀನ್ ಈ ಪ್ರಶಸ್ತಿಯನ್ನು ಎರಡು ಬಾರಿ ಪಡೆದಿದ್ದಾರೆ. ಟ್ರಾನ್ಸಿಸ್ಟರ್‌ಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಮತ್ತು ಎರಡನೇ ಬಾರಿಗೆ ಸೂಪರ್ ವಾಹಕತೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ನೊಬೆಲ್ ಅನ್ನು ಮೂರು ಜನರಿಗೆ ನೀಡಬಹುದು
ನೊಬೆಲ್‌ ಬಹುಮಾನವನ್ನು 3 ಜನರಿಗೆ ನೀಡಬಹುದಾಗಿದೆ. ಈ ಮೂವರು ಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರಬೇಕು. ಮೊದಲ ಮಹಾಯುದ್ಧ ಮತ್ತು ಎರಡನೆಯ ಮಹಾಯುದ್ಧದ ಕಾರಣ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು 6 ಬಾರಿ ನೀಡಿಲ್ಲ.

ಯಾವುದು Milky way?
ಕ್ಷೀರಪಥದಲ್ಲಿ ಸುಮಾರು 200ರಿಂದ 400 ಶತಕೋಟಿ ನಕ್ಷತ್ರಗಳು ಇವೆ. ಅದು ಕನಿಷ್ಠ 100 ಶತಕೋಟಿ (ಬಿಲಿಯನ್) ಗ್ರಹಗಳನ್ನು ಹೊಂದಿದೆ. ವಿಶ್ವದಲ್ಲಿ ಅನೇಕ ಗೆಲಾಕ್ಸಿಗಳು ಇವೆ. ನಮ್ಮ ಸೌರವ್ಯೂಹದ ನಕ್ಷತ್ರಪುಂಜವನ್ನು Milky way ಎಂದು ಕರೆಯಲಾಗುತ್ತದೆ. ಆಕಾಶದಲ್ಲಿ ಇದು ಕ್ಷೀರ ಪಟ್ಟಿಯಂತೆ ಕಾಣುತ್ತದೆ, ಆದ್ದರಿಂದ ಇದಕ್ಕೆ ಕ್ಷೀರಪಥ ಅಥವ Milky way ಎಂದು ಹೆಸರಿಡಲಾಗಿದೆ. Milky way ವೃತ್ತಾಕಾರದಲ್ಲಿದ್ದು, 2 ದಶಲಕ್ಷ ಜ್ಯೋರ್ತಿವರ್ಷಗಳ (ಒಂದು ವರ್ಷದಲ್ಲಿ ಬೆಳಕಿನಿಂದ ಪ್ರಯಾಣಿಸುವ ದೂರ) ವ್ಯಾಸವನ್ನು ಹೊಂದಿದೆ. ಕ್ಷೀರಪಥದಲ್ಲಿ 400 ಬಿಲಿಯನ್ ನಕ್ಷತ್ರಗಳಿವೆ.

ಕ್ಷೀರಪಥವು ನಮ್ಮ ಸೌರವ್ಯೂಹವನ್ನು ಒಳಗೊಂಡಿರುವ ಒಂದು ಬ್ರಹ್ಮಾಂಡ ಅಥವಾ ನೀಹಾರಿಕೆ (ಗ್ಯಾಲಕ್ಸಿ). ‘ಮಿಲ್ಕೀ ವೇ’ ಪದ ಲ್ಯಾಟಿನ್’ನ ‘ವಿಯಾ ಲಾಕ್ಟಿಯಾ’ ಎಂದರೆ “ಹಾಲಿನ ವೃತ್ತ” ಎಂದಾಗುತ್ತದೆ. ಇದರ ಹೆಸರು ಕ್ಷೀರ/ಹಾಲು ಎಂಬ ಪದ (‘ಮಿಲ್ಕಿ’) ಆಕಾಶದಲ್ಲಿ ಅದರ ಗೋಚರತೆಯನ್ನು ನೋಡಿ, ಮಂದವಾಗಿ ಪ್ರಜ್ವಲಿಸುವ ಅದಕ್ಕೆ ಕ್ಷೀರಪಥ ಅಥವಾ ಹಾಲು-ದಾರಿ/ಹಾಲಿನ ದಾರಿ ಎಂಬ ಹೆಸರನ್ನು ವಿಜ್ಞಾನ ನೀಡಿದೆ. ಭಾರತದಲ್ಲಿ ಅದನ್ನು “ಆಕಾಶಗಂಗೆ” ಎಂದು ಕರೆಯಲಾಗುತ್ತದೆ. ಭೂಮಿಯಿಂದ, ಕ್ಷೀರಪಥವು ಒಂದು ಭಾಗಿದ ಪಟ್ಟಿಯಂತೆ ಕಾಣುತ್ತದೆ. ಏಕೆಂದರೆ ಅದು ತಟ್ಟೆಯ ಆಕಾರದಲ್ಲಿದೆ. ಈ ಕುರಿತು ವಿಜ್ಞಾನದಲ್ಲಿ ಗೆಲಿಲಿಯೋ ಆದಿಯಾಗಿ ಹಲವರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದರು.

LEAVE A REPLY

Please enter your comment!
Please enter your name here