ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಗ್ರಾಮಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿ

0

ಅಂಕನಹಳ್ಳಿ ಗ್ರಾಮದಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲದ ಕಾರಣದಿಂದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಇದುವರೆಗೂ ಯಾವುದೇ ಅಧಿಕಾರಿಗಳು ಗಮನಹರಿಸಿದೆ ಬೇಜವಾಬ್ದಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ಅಂಕನಹಳ್ಳಿ ಗ್ರಾಮಸ್ಥರು ಹೇಳುತ್ತಿದ್ದರೆ.
ಮಳೆ ಬಂದರೆ ಮನೆಯ ಒಳಗೆ ಚರಂಡಿಯ ನೀರು ಹರಿಯುತ್ತಿದ್ದು ಜನಸಾಮಾನ್ಯರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಇನ್ನಾದರೂ ನಿಟ್ಟೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಊರಿನ ಗ್ರಾಮಸ್ಥರು ಎಷ್ಟು ಬರೀ ಮನವಿ ಮಾಡಿದರು ಕೂಡಾ ಯಾವುದೇ ರೀತಿಯ ಯಾವೋಬ್ಬ ಅಧಿಕಾರಿಗಳು ಕೂಡ ಗಮನಹರಿಸಿಲ್ಲ ಮತ್ತು ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಊರಿನ ಗ್ರಾಮಸ್ಥರು ತಿಳಿಸಿದ್ದರೆ.. ಈಗಲೂ ಆದರೂ ಎಚ್ಚೆತ್ತು ಕೊಳ್ಳದ್ದಿದ್ದರೆ ಗ್ರಾಮಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೆವೆ ಎಂದು ಊರಿನ ಗ್ರಾಮಸ್ಥರು ಆದಂತಹ ಸಣ್ಣಮ್ಮ , ಸೌಭಾಗ್ಯಮ್ಮ , ಪುಟ್ಟಸ್ವಾಮಿ ,ಶಿವಣ್ಣ ಮತ್ತು ಊರಿನ ಗ್ರಾಮಸ್ಥರು ತಿಳಿಸಿದ್ದಾರೆ.
ವರದಿಗಾರರು :::::: ಪ್ರತಾಪ್. ಎ.ಬಿ.
ಮಳವಳ್ಳಿ

 

LEAVE A REPLY

Please enter your comment!
Please enter your name here