ಮಂಡ್ಯ ತಾಲ್ಲೂಕಿನ ಆನಸೋಸಲು ಗ್ರಾಮದ ಅಶೋಕ್ ಅವರ ಜಮೀನಿನಲ್ಲಿ ಯಂತ್ರದ ಮೂಲಕ ನಾಟಿ ಮಾಡಿಸಲಾಯಿತು.

0

ಮಂಡ್ಯ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಡ್ಯ ತಾಲ್ಲೂಕಿನ ಆನಸೋಸಲು ಗ್ರಾಮದ ಅಶೋಕ್ ಅವರ ಜಮೀನಿನಲ್ಲಿ ಯಂತ್ರ ಶ್ರೀ ಕಾರ್ಯಕ್ರಮದಡಿಯಲ್ಲಿ ಯಂತ್ರದ ಮೂಲಕ ನಾಟಿ ಮಾಡಿಸಲಾಯಿತು.

ನಂತರ ಜಿಲ್ಲಾ ನಿರ್ದೇಶಕರಾದ ವಿನಯ್ ಕುಮಾರ್ ಸುವರ್ಣ ಅವರು ಮಾತನಾಡಿ ಪೂಜ್ಯ ಡಾಕ್ಟರ್ ಡಿ.ವೀರೇಂದ್ರ ಹೆಗ್ಗಡೆ ಅವರ ಕನಸಿನಂತೆ ರೈತರಿಗೆ ಭತ್ತ ಬೇಸಾಯಕ್ಕೆ ಅನುಕೂಲವಾಗಲು ಯಂತ್ರದ ಮೂಲಕ ನಾಟಿ ಮಾಡುವ ರೇಡಾನ್ ಮತ್ತು ವಾಕ್ ಬಿಯಾಂಡ್ ಎಂಬ ಹೂಸ ಯಂತ್ರಗಳನ್ನು ನೀಡಿದ್ದಾರೆ ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮತ್ತು ಎಲ್ಲ ರೈತರಿಗೂ ತುಂಬಾ ಅನುಕೂಲವಾಗಿದೆ ಭತ್ತ ಬೇಸಾಯಕ್ಕೆ ಕೂಲಿಯಾಳುಗಳ ಸಂಖ್ಯೆ ಹೆಚ್ಚಾಗಿ ಬೇಕಾಗಿತ್ತು ಹಾಗೂ ಅದರಿಂದ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿತ್ತು ಕೂಲಿಯಾಳುಗಳ ಸಮಸ್ಯೆಯಿಂದ ರೈತರಿಗೆ ಸರಿಯಾದ ಸಮಯಕ್ಕೆ ನಾಟಿ ಮಾಡಲು ಆಗುತ್ತಿರಲಿಲ್ಲ ಆದ್ದರಿಂದ ಪೂಜ್ಯರು ಭತ್ತ ಬೇಸಾಯ ಎಂಬುದು ರೈತರ ಸ್ನೇಹ ಜೀವಿ ಇದ್ದಹಾಗೆ ಅದಕ್ಕೆ ಅನುಕೂಲವಾಗಲು ಹೊಸ ಹೊಸ ಯಂತ್ರಗಳನ್ನು ನೀಡಿದ್ದಾರೆ ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡು ಭತ್ತ ಕೃಷಿ ಯಲ್ಲಿ ಅಭಿವೃದ್ಧಿಯನ್ನು ಯಾಗಿ ಎಂದು ಶುಭ ಹಾರೈಸಿದರು.

ನಂತರ ಸಹಾಯಕ ನಿರ್ದೇಶಕರಾದ ಪ್ರತಿಭಾ ಅವರು ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಮಂಡ್ಯ ತಾಲ್ಲೂಕಿನಲ್ಲಿ ಉತ್ತಮವಾದ ಸೇವೆ ಸಲ್ಲಿಸುತ್ತಿದೆ ಈಗಾಗಲೇ ಕೃಷಿ ಯಂತ್ರಧಾರೆಯಲ್ಲಿ ಉಳುಮೆಗೆ ಹಾಗೂ ಒಕ್ಕಣೆಗೆ ಒಳ್ಳೆಯ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದೆ ಮುಂದಿನ ದಿನಗಳಲ್ಲಿ ರೈತರಿಗೆ ನಾಟಿ ಮಾಡಲು ಈ ಎರಡು ಹೊಸ ಯಂತ್ರಗಳನ್ನು ಕೂಡ ಉತ್ತಮ ರೀತಿಯಲ್ಲಿ ಸೇವೆಯನ್ನು ಕೊಡುತ್ತದೆ ಹಾಗಾಗಿ ಎಲ್ಲ ರೈತರಿಗೂ ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಿ ಇದರಿಂದ ತುಂಬಾ ಪ್ರಯೋಜನವಾಗುತ್ತದೆ ಯಂತ್ರದ ಮೂಲಕ ನಾಟಿಯನ್ನು ಮಾಡಿಸಿದರೆ ಭತ್ತ ಬೇಸಾಯದಲ್ಲಿ ತುಂಬಾ ಬದಲಾವಣೆಯನ್ನು ಕಾಣಬಹುದು ಎಂದು ತಿಳಿಸಿದರು.

ನಂತರ ಅಶೋಕ್ ಅವರು ಮಾತನಾಡಿ ಸಾಮಾನ್ಯ ಪದ್ಧತಿಗಿಂತ ಯಂತ್ರ ಶ್ರೀ ಪದ್ಧತಿ ತುಂಬಾ ಅನುಕೂಲಕರವಾಗಿರುವುದು ಆದ್ದರಿಂದ ಎಲ್ಲ ರೈತರು ಮುಂದೆ ಬಂದು ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿಕೊಳ್ಳಿ ಇದರಿಂದ ತುಂಬಾ ಪ್ರಯೋಜನ ಸಿಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಸದಾನಂದ ಬಂಗೇರ ಕೃಷಿ ಯೋಜನಾಧಿಕಾರಿ ಸುಧೀರ್ ಜೈನ್ ಯಂತ್ರಧಾರೆ ಯೋಜನಾಧಿಕಾರಿ ದಿನೇಶ್ ಸಾವಯವ ಕೃಷಿಕರಾದ ಅಶೋಕ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಾಮೇಗೌಡ ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಕೃಷಿ ಮೇಲ್ವಿಚಾರಕರಾದ ನವೀನ್ ಕುಮಾರ್ ಬಸರಾಳು ವಲಯದ ಮೇಲ್ವಿಚಾರಕರಾದ ಶೋಭಾ ಕೃಷಿ ಯಂತ್ರಧಾರೆಯ ಪ್ರಬಂಧಕರಾದ ಅಭಿಲಾಷ್ ಸೇವಾ ಪ್ರತಿನಿಧಿಯಾದ ಜ್ಯೋತಿ ಹಾಗೂ ಸಂಘದ ಸದಸ್ಯರು ಮತ್ತು ಊರಿನ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here