ಮಂತ್ರಾಲಯ: ಭಕ್ತರಿಗೆ ಬಾಗಿಲು ತೆರೆದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ

0

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮಹಾದ್ವಾರವನ್ನು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಕ್ಟೋಬರ್‌ 2ರಂದು ಮಧ್ಯಾಹ್ನ 1 ಗಂಟೆಗೆ ತೆರೆದರು.

ಭಕ್ತರು ಅಂತರ ಕಾಯ್ದುಕೊಂಡು ದರ್ಶನ ಪಡೆಯುವುದಕ್ಕೆ ಅವಕಾಶ ಮಾಡಲಾಗಿದ್ದು, ಮಠದ ಪ್ರಾಕಾರದಿಂದ ಹೊರಗೆ ಮುಂಭಾಗದಲ್ಲಿ ಸರದಿ ನಿಲ್ಲುವುದಕ್ಕೆ ವ್ಯವಸ್ಥೆ ಇದೆ. ಸದ್ಯ ಸಾಮಾನ್ಯ ದರ್ಶನಕ್ಕೆ ಮಾತ್ರ ಅವಕಾಶ ಮಾಡಲಾಗಿದ್ದು, ವಿಐಪಿ ದರ್ಶನ ಇನ್ನೂ ಆರಂಭಿಸಿಲ್ಲ.

ಮಠದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಾದ್ಯ, ವೇದಘೋಷ ಸಮೇತ ಆಗಮಿಸಿದ ಪೀಠಾಧಿಪತಿಗಳು, ಮಠದ ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ಪುಳಕಿತರಾದರು. ಸರದಿಯಲ್ಲಿ ಮಠದೊಳಗೆ ಹೋಗಿ ಬೃಂದಾವನ ದರ್ಶನ ಪಡೆದರು.

ಕೊರೊನಾ ಮಹಾಮಾರಿ ಸೋಂಕು ತಡೆ ಮುನ್ನಚ್ಚರಿಕೆ ಕ್ರಮವಾಗಿ ಕಳೆದ ಆರು ತಿಂಗಳುಗಳಿಂದ ಮಠದ ಬಾಗಿಲನ್ನು ಬಂದ್‌ ಮಾಡಲಾಗಿತ್ತು.

LEAVE A REPLY

Please enter your comment!
Please enter your name here