ಮದುವೆ ನಿಶ್ಚಯವಾಗಿದ್ದ ಯುವತಿ ಮತ್ತೋರ್ವನೊಂದಿಗೆ ನಾಪತ್ತೆ: ಆಘಾತದಿಂದ ತಂಗಿ ಸಾವು

0

ಮದುವೆ ನಿಶ್ಚಿತಾರ್ಥವಾಗಿದ್ದ ಅಕ್ಕ ಮನೆಯಿಂದ ನಾಪತ್ತೆಯಾದ ಹಿನ್ನಲೆಯಲ್ಲಿ ಮನನೊಂದ ಯುವತಿಯ ತಂಗಿ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದಲ್ಲಿ ಶುಕ್ರವಾರ ನಡೆದಿದೆ.

ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಳ ಗ್ರಾಮದ ಯುವತಿ ಗುರುವಾರ ನಾಪತ್ತೆಯಾಗಿದ್ದಳು. ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.

ನಾಪತ್ತೆಯಾದ ಯುವತಿ ಹೊರಟು ಹೋಗುವಾಗ ತನ್ನ ತಂಗಿಯ ಮೊಬೈಲ್ ಗೆ ಕರೆ ಮಾಡಿ ಮನೆಯಲ್ಲಿ ನಿಶ್ಚಯ ಮಾಡಿರುವ ಹುಡುಗನೊಂದಿಗೆ ಮದುವೆಯಾಗಲು ಇಷ್ಟವಿಲ್ಲದ ಕಾರಣ ಪ್ರೀತಿಸಿದ ಸಹೋದ್ಯೋಗಿ ಯುವಕನೊಂದಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಳು. ಅಲ್ಲದೆ ಹುಡುಕುವ ಪ್ರಯತ್ನ ಮಾಡದಂತೆ ತಂಗಿಗೆ ತಿಳಿಸಿದ್ದಳು.

ಅಕ್ಕನ ಮಾತಿನಿಂದ ಆಘಾತಗೊಂಡ ತಂಗಿ ಅನಂತರ ನೊಂದಿದ್ದಳು. ಆಕೆ ತೀವ್ರ ಅಸ್ವಸ್ಥಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಯುವತಿಗೆ ಲಾಕ್ ಡೌನ್ ಸಂದರ್ಭದಲ್ಲಿ ನಿಶ್ಚಿತಾರ್ಥ ನೆರವೇರಿದ್ದು, ಆಕೆ ಸಹೋದ್ಯೋಗಿ ಅಸ್ಸಾಂ ಮೂಲದ ಯುವಕನನ್ನು ಪ್ರೀತಿಸಿದ್ದಳು ಎಂದು ಮನೆಯವರು ಸಂಶಯ ವ್ಯಕ್ತಪಡಿಸಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here