ಮದುವೆ ಬಗ್ಗೆ ಪ್ರಶ್ನೆಗೆ ಅನುಷ್ಕಾ ನೀಡಿದ ಉತ್ತರ ಏನು ಗೊತ್ತಾ.?

0

ಹಲವಾರು ಯಶಸ್ವಿ ಸಿನಿಮಾಗಳ ಮೂಲಕ ಅನುಷ್ಕಾ ಶೆಟ್ಟಿ ಮನೆ ಮಾತಾದ ನಟಿ. ತನ್ನ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ಈ ನಟಿಯ ಅಭಿನಯಕ್ಕೆ ಮನಸೋಲದೇ ಇರೋವ್ರಿಲ್ಲ. ಅನುಷ್ಕಾ ಶೆಟ್ಟಿಯ ನಿಶ್ಯಬ್ದಂ ಸಿನಿಮಾ ನಾಳೆ ಅಮೇಜಾನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಪ್ರಮೋಷನ್ ಕಾರ್ಯದಲ್ಲಿ ಅನುಷ್ಕಾ ಬ್ಯುಸಿಯಾಗಿದ್ದಾರೆ.

ಕೊರೊನಾ ಇರೋದ್ರಿಂದ ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಮೋಷನ್ ಕಾರ್ಯ ಮಾಡುತ್ತಿದ್ದಾರೆ ಈ ನಟಿ. ಇನ್ನು ಜೂಮ್ ಮೂಲಕ ಪತ್ರಕರ್ತರ ಜೊತೆ ಸಂವಾದ ಕೂಡ ಮಾಡಿದ್ದಾರೆ. ಹೀಗೆ ನಡೆದ ಸಂವಾದದಲ್ಲಿ ಪತ್ರಕರ್ತರೊಬ್ಬರು ಅನುಷ್ಕಾ ಮದುವೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಮದುವೆ ಯಾವಾಗ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದಾಗ ಒಂದು ಕ್ಷಣ ವಿಚಲಿತರಾದ ಅನುಷ್ಕಾ ನಂತರ ಈ ಪ್ರಶ್ನೆಗೆ ಉತ್ತರ ನೀಡಿಲ್ಲ. ಈ ಪ್ರಶ್ನೆಗೆ ಉತ್ತರಿಸೋದಕ್ಕೆ ನನಗೆ ಇಷ್ಟವಿಲ್ಲ ಎಂಬ ಉತ್ತರ ಹೇಳಿದ್ದಾರೆ. ಈ ಮೂಲಕ ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾರೆ.

LEAVE A REPLY

Please enter your comment!
Please enter your name here