ಮದ್ಯದಲ್ಲಿ ಡ್ರಗ್ಸ್ ನೀಡ್ತಿದ್ದಳು ಮಾಡೆಲ್ ಪತ್ನಿ

0

ನಟ ಸುಶಾಂತ್ ಸಿಂಗ್ ಪ್ರಕರಣ ನೆನಪಿಸುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಯುವಕನ ಮೃತ ದೇಹ ಆತನ ಫ್ಲಾಟ್ ನ ಬಾತ್ ರೂಮಿನಲ್ಲಿ ಸಿಕ್ಕಿದೆ. ಮಾಡೆಲ್ ಪತ್ನಿ ಮದ್ಯದಲ್ಲಿ ಡ್ರಗ್ಸ್ ಬೆರೆಸಿ ಪತಿಗೆ ನೀಡ್ತಿದ್ದಳು ಎನ್ನಲಾಗಿದೆ.

ಬೆಂಗಳೂರಿನಲ್ಲಿ ಮಾಡಲಿಂಗ್ ಮಾಡ್ತಿದ್ದ ಶಿವಾನಿ, ಪತಿ ದಿನೇಶ್ ಗೆ ಮದ್ಯದಲ್ಲಿ ಡ್ರಗ್ಸ್ ನೀಡ್ತಿದ್ದಳಂತೆ. ಇದ್ರಿಂದ ಬೇಸತ್ತ ಪತಿ ದಿನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮಧ್ಯಪ್ರದೇಶದ ಚಾರ್ಗಾಂವ್ ಗ್ರಾಮದ ನಿವಾಸಿ ದಿನೇಶ್. ದಿನೇಶ್, ಕುಟುಂಬ ಬರೇಲಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ. ಮಧ್ಯಪ್ರದೇಶ ಪೊಲೀಸರು ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ.

ಪತ್ನಿ ಶಿವಾನಿ, ಆಕೆ ಸ್ನೇಹಿತೆ ಹಾಗೂ ದಿನೇಶ್ ಕೆಲಸ ಮಾಡ್ತಿದ್ದ ಕಂಪನಿ ಬಾಸ್ ದಿನೇಶ್ ಗೆ ಜೀವ ಬೆದರಿಕೆ ಹಾಕ್ತಿದ್ದರಂತೆ. ದಿನೇಶ್ ನನ್ನು ಮಾದಕದ್ರವ್ಯ ವ್ಯಸನಿ ಮಾಡಿದ್ದರಂತೆ. 2019ರಲ್ಲಿ ಶಿವಾನಿ ಹಾಗೂ ದಿನೇಶ್ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 23ರಂದು ದಿನೇಶ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದಕ್ಕೂ ಮುನ್ನ ಮನೆಗೆ ಕರೆ ಮಾಡಿದ್ದ ದಿನೇಶ್, ಶಿವಾನಿ ಹಾಗೂ ಆಕೆ ಸ್ನೇಹಿತೆ ನನಗೆ ಡ್ರಗ್ಸ್ ನೀಡ್ತಾರೆ ಎಂದಿದ್ದನಂತೆ.

ಘಟನೆ ನಂತ್ರ ಮನೆಗೆ ಕರೆ ಮಾಡಿದ್ದ ಶಿವಾನಿ, ದಿನೇಶ್ ಬಾತ್ ರೂಮ್ ಬಾಗಿಲು ತೆರೆಯುತ್ತಿಲ್ಲ ಎಂದಿದ್ದಳಂತೆ. ಬೆಂಗಳೂರಿನಿಂದ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇನೆಂದು ಪೊಲೀಸರು ಹೇಳಿದ್ದಾರೆ.

LEAVE A REPLY

Please enter your comment!
Please enter your name here