ಮನಿಷಾ ವಾಲ್ಮೀಕಿ ಅತ್ಯಾಚಾರ, ಹತ್ಯೆ ಖಂಡಿಸಿ ದಲಿತ ಯುವಕರಿಂದ ಧಿಡೀರ್ ಪಂಜಿನ ಮೆರವಣಿಗೆ,

0

ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ದಿನಾಂಕ: 5-10-2020 ರಂದು ಸಂಜೆ 8 ಗಂಟೆಗೆ ” ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದ ದಲಿತ ಯುವತಿ ಮನಿಷಾ ವಾಲ್ಮೀಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಕೃತ್ಯವನ್ನ ಖಂಡಿಸಿ ಕಂಪ್ಲಿಯ ದಲಿತ ಕೇರಿಯ ಸುಮಾರು 200ಕ್ಕೂ ಅಧಿಕ ಯುವಕರು ಸ್ಥಳೀಯ ಮಾರ್ಕೆಟ್ ಶಾಲೆಯಲ್ಲಿ ಸಭೆ ಸೇರಿ ಸ್ಥಳೀಯ ಮಾರ್ಕೆಟ್ ಶಾಲೆಯಿಂದ ಕಂಪ್ಲಿಯ ಪ್ರಮುಖ ರಸ್ತೆಗಳ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ಮುಖಾಂತರ ಉತ್ತರ ಪ್ರದೇಶದ ಮುಖ್ಯ ಮಂತ್ರಿ ವಿರುದ್ಧ ಘೋಷಣೆ ಕೂಗುತ್ತಾ ನಗರದ ಪ್ರಮುಖ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಮುಂಬತ್ತಿ ಹಚ್ಚಿ ಮೌನಾಚರಣೆ ಮಾಡುವ ಮೂಲಕ ಧಿಢೀರ್ ಪ್ರತಿಭಟನೆ ಮಾಡಿದರು,
ಈ ಸಂಧರ್ಭದಲ್ಲಿ ಪ್ರತಿಭಟನೆಯ ನೇತೃತ್ವವಹಿಸಿದ್ದ ಗ್ಯಾನಿ ರವರು ” ದೇಶದಲ್ಲಿ ದಿನೇ ದಿನೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಹತ್ಯೆ. ಹಲ್ಲೆ. ಲೈಂಗಿಕ ಕಿರುಕುಳ ಹೆಚ್ಚುತ್ತಿದ್ದು ಇದು ಮಾನವ ಕುಲಕ್ಕೆ ನಾಚಿಕೆ ಗೇಡಿನ ಸಂಗತಿಯಾಗಿದೆ. ದಲಿತ ಯುವತಿ ಮನಿಷಾ ವಾಲ್ಮೀಕಿಯನ್ನ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಆರೋಪಿಗಳನ್ನ ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಒತ್ತಾಯಿಸಿದರು!

ಈ ಸಂಧರ್ಭದಲ್ಲಿ ಪ್ರಮುಖರಾದ ವೀರೇಶ್. ಬಸವರಾಜ್. ಮನೋಜ್ ಕುಮಾರ್, ಜಮೀರ್. ಮಂಜುನಾಥ್. ಶಶಿ ಹಾಗೂ ಇತರರು ಪಾಲ್ಗೊಂಡಿದ್ದರು!

LEAVE A REPLY

Please enter your comment!
Please enter your name here