ಇವರಿಗೆ
ಮಾನ್ಯ ಜಿಲ್ಲಾಧಿಕಾರಿಗಳು
ಕಾರ್ಯಲಯ ಯಾದಗಿರಿ.
“ಮಾನ್ಯರೆ”
ವಿಷಯ : ಅಗತೀರ್ಥ ಗ್ರಾಮದಲ್ಲಿ ದಿನಾಂಕ : 23/05/2019 ರಂದು 14 ಮನೆಗಳು ಬಿದ್ದು ಹಾನಿಯಾಗಿರುತ್ತವೆ, ಒಂದು ವರ್ಷ
ಕಳೆದರು ಪರಿಹಾರ ನೀಡಿರುವುದಿಲ್ಲ. ಈ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಹಾಗೂ ತಾಲೂಕಿನ ವಿವಿಧ
ಬೇಡಿಕೆಗಳು ಪೂರೈಸುವ ಕುರಿತು.
ಉಲ್ಲೇಖ : 1) ಕಂದಾಯ ನಿರೀಕ್ಷಕರು ಹುಣಸಗಿ ರವರ ಪತ್ರ ನಂ. ಕಂ ನೈ.ಅ/ಕಂ.ನೀ.ಕೋ/2016-19 ದಿನಾಂಕ: 25/05/219
2) ಮಾನ್ಯ ಸುರಪುರ ತಹಶಿಲ್ದಾರ ಕಾರ್ಯಾಲಯಕ್ಕೆ ತಲುಪಿದ ದಿನಾಂಕ 12/06/2019
3) ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ಇವರ ಪತ್ರ ಸಂ/ಕಂ/ನೈವಿಪ/37244/2019-20 ದಿನಾಂಕ: 03/02/2020
4) ಸುರಪುರ ತಹಶಿಲ್ದಾರರ ಕಾರ್ಯಾಲಯ ಇವರ ಪತ್ರ ನಂ. ಸಂ/ಕಂ/ನೈವಿಪ/02/2019-20 ದಿನಾಂಕ 08/07/2020.
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಯ ನೂತನ ಹುಣಸಗಿ ತಾಲೂಕಿನ ಅಗತೀರ್ಥ ಎಂಬ ಗ್ರಾಮದಲ್ಲಿ ದಿನಾಂಕ 23/05/2019 ರಂದು ರಾತ್ರಿ 8:00 ಗಂಟೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಒಟ್ಟು 14 ಮನೆಗಳು ಸಂಪೂರ್ಣ ಬಿದ್ದು ಅಪಾರ ಪ್ರಮಾಣದ ನಷ್ಟವಾಗಿದ್ದು, ಈ ಸುದ್ದಿ ರಾಜ್ಯಾದ್ಯಂತ ಹೆಸರಾಂತ ಉದಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತು.
ಈ ಸಂದರ್ಭದಲ್ಲಿ ಹುಣಸಗಿ ತಹಶಿಲ್ದಾರರು ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ಇಲಾಖೆ ನೀರಿಕ್ಷಕ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ವರದಿ ಮಾಡಿ ಪರಿಹಾರ ನೀಡಲು ಎಂದು ಸುರಪುರ ತಹಶಿಲ್ದಾರರಿಗೆ ಉಲ್ಲೇಖ 2 ಪತ್ರ ಕಳಿಸಿಕೊಟ್ಟಿದ್ದರು. ಆದರೆ ಆಗಿನ ತಹಶಿಲ್ದಾರರಾದ ಸುರೇಶ್ ಅಂಕಲಗಿ ಅವರು 3-4 ತಿಂಗಳುಗಳ ಕಾಲ ಹರಣ ಮಾಡಿ ಕುಂಟು ನೇಪ ಹೇಳಿ ನಿರಾಶ್ರಿತರಿಗೆ ನೋವುಂಟು ಮಾಡಿರುತ್ತಾರೆ. ನಾವು ಬಿದ್ದಿರುವ ಮನೆಗಳಿಗೆ ಪರಿಹಾರ ಕೊಟ್ಟಿಲ್ಲವೆಂದು ಹೇಳಿರಿತ್ತಾರೆ.
ನಿರಾಶ್ರಿತರು ಪರಿಹಾರ ಸಿಗಬಹುದು ಎಂದೂ ಕಛೇರಿಗಯಿಂದ ಕಛೇರಿಗೆ ಸುಮಾರು ಭಾರಿ ಅಲೆದಾಡಿ ಸಾಕಷ್ಟು ಹಣವನ್ನು ವೆಚ್ಚ ಮಾಡಿಕೊಂಡಿರುತ್ತಾರೆ. ನಿರಾಶ್ರಿತರು ಕಾರ್ಯಾಲಯಕ್ಕೆ ಬಂದಾಗ ಡಿಸಿ ಸಾಹೇಬರಿಗೆ ಕೇಳಿ ಕೊಡ್ತೀನಿ, ಸಾಹೇಬರಿಗೆ ಲೆಟರ್ ಬರೆದಿದ್ದೀನಿ ಕಳಿಸಬೇಕು ಎಂದು ಲೇಟರ್ ತೋರಿಸಿ ಕಳಿಸಿರುತ್ತಾರೆ.
02
ಆದರೆ ಅನಾವಶ್ಯಕವಾಗಿ ಅಂದಿನ ತಹಶೀಲ್ದಾರ್ ಸರೇಶ ಅಂಕಲಗಿ ಅವರು ಪರಿಹಾರ ಕೊಡದೆ ಬೇರೆಡೆಗೆ ವರ್ಗಾವಣೆಯಾಗಿರುತ್ತಾರೆ.
ಇದೆ ಸಂದರ್ಭದಲ್ಲಿ ಹೊಸದಾಗಿ ಆಗಮಿಸಿದ ತಹಶಿಲ್ದಾರರು ನಿಂಗಣ್ಣ ಬಿರಾದಾರ ಅವರು ಮಾನ್ಯ ಶ್ರೀ ಸುರೇಶ ಅಂಕಲಗಿ ಅವರು ಬರೆದಿಟ್ಟಿರುವ ಲೆಟರ್ ಜಿಲ್ಲಾಧಿಕಾರಿಗಳಿಗೆ ತಹಶಿಲ್ದಾರ ಕಾರ್ಯಾಲಯ ಸುರಪುರದಿಂದ ಮಾಹಿತಿಯನ್ನು ಕಳಿಸಿರುತ್ತಾರೆ.
ಮನೆಗಳಿಗೆ ಪರಿಹಾರ ಕೊಡುಬಹುದೆ..?
ಎಂಬುವುದರ ಬಗ್ಗೆ ಮಾಹಿತಿ ಕೇಳಿರುತ್ತಾರೆ ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಉಲ್ಲೇಖ : 3 ರ ಪತ್ರದಲ್ಲಿ SDRF ಹಾಗೂ NDRF ಮಾರ್ಗ ಸೂಚಿಗಳ ಅನುಸಾರವಾಗಿ ನಿಮ್ಮ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದೂ ತಿಳಿಸಿರುತ್ತಾರೆ.
ಆದರೆ ಮಾನ್ಯ ಜಿಲ್ಲಾ ಅಧಿಕಾರಗಳ ಆದೇಶ 13/02/2020 ರಂದು ತಹಶಿಲ್ದಾರ ಕಾರ್ಯಾಲಯ ಸುರಪುರ ಗೆ ಬಂದು ತಲುಪಿರುತ್ತೆ. ನಿರಾಶ್ರಿತರು ಮತ್ತೆ ಬಂದು ಕೇಳಿದರು ಸಹ ನಾಳೆ ಬನ್ನಿ ನಾಡಿದ್ದು ಬನ್ನಿ ಅಂತ ಇವರು ಸಹ 3 ತಿಂಗಳು ಕುಂಟು ನೇಪ ಹೇಳಿ ಕಳಿಸಿರುತ್ತಾರೆ, ಆದರೂ ಬೇಸರ ಪಡದೆ ನಿರಾಶ್ರಿತರು ಮತ್ತೆ ಬಂದು ಕೇಳಿದಾಗ ಕೋನೆಗೆ ನಿಮಗೆ ಪರಿಹಾರದ ಮೊತ್ತ 3200 ರೂ ಮಾತ್ರ ಕೊಡಲಾಗುತ್ತೆ. ನೀವು ಕೇಳಿದ 70000-80000 ಸಾವಿರ ಹೆಚ್ಚಿನ ಪರಿಹಾರ ಕೊಡುವುದಕ್ಕೆ ಆಗಲ್ಲ ಅಂತ ಹೇಳಿರುತ್ತಾರೆ.
ತಹಸಿಲ್ದಾರ ಸಾಹೇಬರಿಗೆ ನಿರಾಶ್ರಿತರು ಎಷ್ಟೇ ಬೇಡಿಕೊಂಡರು ಸಹ ಪರಿಹಾರ ನೀಡಿರುವುದಿಲ್ಲ. ಒಂದು ವರ್ಷ ಕಳೆದರೂ ಮತ್ತೆ ಸ್ಥಳ ಪರಿಶೀಲನೆ ಮಾಡುತ್ತೇನೆ, ಸರಿಯಾಗಿ ಇದ್ದರೆ ಪರಿಹಾರ ಸಿಗಲ್ಲ ಎಂದು ಹೇಳಿ ಕಳಿಸಿರುತ್ತಾರೆ.
ಮನೆಗಳೆಲ್ಲ ಬಿದ್ದು ಒಂದು ವರ್ಷ ಕಳೆದಿರುತ್ತೆ ತಮಗೆ ಕೈಲಾದಷ್ಟು ರೀಪೆರಿ ಮಾಡಿಕೊಂಡು ಜನ ಜೀವನ ನಡೆಸುತ್ತಿದ್ದು ಮತ್ತೆ ಮರು ಪರಿಶೀಲನೆ ಮಾಡುವುದು ಅದೆಷ್ಟು ಸರಿ.. ಹೀಗೆ ಮಾಡುವುದು ಬಹುಜನ ಸಮಾಜ ಪಾರ್ಟಿ ಖಂಡಿಸುತ್ತದೆ.
ಹಾಗೂ ಮತ್ತೆ ಸುರಪುರ ತಹಶಿಲ್ದಾರರು ಹುಣಸಿಗಿ ತಹಶಿಲ್ದಾರರಿಗೆ ಉಲ್ಲೇಖ 4 ಪತ್ರ ಬರೆದು ನಿಖರವಾಗಿ ಎಷ್ಟು ಪರಿಹಾರ ಕೊಡಬೇಕು ಎನ್ನುವುದರ ಬಗ್ಗೆ ವಿವರ ಕೊಡಿ ನಾವು ನಿಮಗೆ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದೂ ತಿಳಿಸಿರುತ್ತಾರೆ.ಆದರೆ ಹುಣಸಗಿ ತಹಶಿಲ್ದಾರರಿಗೆ ಬೇಟಿ ಕೊಟ್ಟಾಗ ಮನೆಗಳನ್ನು ಮತ್ತೆ ಪರಿಶಿಲನೆ ಮಾಡಬೇಕು ಅವರ ಹೆಸರಲ್ಲಿ ಮನೆ ಇದಾವೋ ಇಲ್ಲವೋ ಎಂದೂ ಜಿಲ್ಲಾ ಪಂಚಾಯತ ಇಂಜಿನಿಯರ್ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನೆಗಳು ರಿಜಿಸ್ಟರ್ ಬಗ್ಗೆ ಮಾಹಿತಿ ಕೇಳಿ ಅವರಿಂದ ಮಾಹಿತಿ ಪಡೆದು ಪರಿಶಿಲಿಸಿ ಮುಂದೆ ಪರಿಹಾರ ಕೊಡುಬೇಕೊ ಇಲ್ಲವೋ ಎಂದೂ ಬೆಜವಬ್ದಾರಿ ಹೇಳಿಕೆ ನೀಡಿದ್ದರು ಒಂದು ವರ್ಷ ಕಳೆದರು ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರ ಹಾಕಿ ಮುಂದುಡುತ್ತಿರುವುದು ಖಂಡನಿಯ.
ಬಡ ಕುಟುಂಬಗಳಿಗೆ ಸ್ಪಂದಿಸದ ಇಂತ ಅಧಿಕಾರಿಗಳ ಮೇಲೆ ಮೇಲು ಅಧಿಕಾರಿಗಳು ದಿಟ್ಟ ಕ್ರಮ ಕೈಗೊಳ್ಳಬೇಕು.
➡ ಪಕ್ಕಾ ಮನೆಯೆಲ್ಲಿ ಆರ್ಸಿಸ್ ಮನೆಗಳು ಬರುತ್ತವೆ.
03
➡ ಕಚ್ಚಾ ಮನೆಗಳೆಂದರೆ ಜಂತಿ ಮನೆ, ಗೊಡೆ ಕಟ್ಟಿ ಟಿನ್ ಹಾಕಿರುವ ಮನೆಗಳು, ಮತ್ತು ಶೆಡ್ ಗಳು, ಗುಡಿಸಲುಗಳು ಇವು
ಕಚ್ಚಾ ಮನೆಗೆ ಪರಿವರ್ತನೆಯಾಗುತ್ತವೆ.
SDRF/NDRF ಸೂಚನೆಗಳ ಪ್ರಕಾರ*
9.HOUSING
➡ ಪಕ್ಕಾ ಮನೆಗೆ 1,01,900 ರೂಗಳು ಒಂದು ಮನೆಗೆ ಪರಿಹಾರ ನಿಡಲಾಗುತ್ತದೆ.
➡ ಕಚ್ಚಾ ಮನೆ ಪೂರ್ಣ ಪ್ರಮಾಣದಲ್ಲಿ ನಷ್ಟವಾದರೆ 95,100 ರೂಗಳು ಪ್ರತಿ ಮನೆಗೆ ಪರಿಹಾರ ನಿಡಲಾಗುತ್ತೆ.
➡ ಕಚ್ಚಾ ಮನೆಗಳು ಅಲ್ಪ ಪ್ರಮಾಣದಲ್ಲಿ ನಷ್ಟವಾದರೆ 5,200 ರೂ ಹಾಗೂ 3,200 ರೂಗಳು ನೀಡಲಾಗುತ್ತದೆ.
ಈ ಮಾರ್ಗ ಸೂಚಿ ಪ್ರಕಾರ 14 ಮನೆಗಳು ಪೂರ್ತಿ ಪ್ರಾಮಾಣದಲ್ಲಿ ನಷ್ಟವಾಗಿದ್ದು ಮತ್ತು ಅವು ಎಲ್ಲವೂ ಕಚ್ಚಾ ಮನೆಗಳಾಗಿವೆ.
ಅದಕ್ಕಾಗಿ ನಿರಾಶ್ರಿತರಿಗೆ 95,100 ರೂಗಳವರೆಗೆ ಪರಿಹಾರವನ್ನು ಸ್ವತಃ ತಹಶಿಲ್ದಾರವರೆ ನೀಡುವಂತ ಅಧಿಕಾರವಿರುತ್ತದೆ.
ಈ ನಿರಾಶ್ರಿತರಿಗೆ ತಾಲೂಕು ಅಧಿಕಾರಿಗಳು ಒಂದು ವರ್ಷದವರಿಗೆ ಕಾಯಿಸಿ ಸತಾಯಿಸುತ್ತಿದ್ದಾರೆ ಇದನ್ನು ಬಹುಜನ ಸಮಾಜ ಪಾರ್ಟಿ ಖಂಡಿಸುತ್ತದೆ.
ಮಾನ್ಯ ಜಿಲ್ಲಾಧಿಕಾರಿಗಳು ಇಂತ ಬೆಜವಾಬ್ದಾರಿ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಜರಗಿಸಬೇಕು. ಮತ್ತು 14 ಮನೆಗಳು ಸಂಪೂರ್ಣವಾಗಿ ನಷ್ಟವಾಗಿರುವುದರಿಂದ ಕನಿಷ್ಟ 75,000-80,000 ರೂ ಗಳವರೆಗೆ ಸ್ಥಳದಲ್ಲೆ ಪರಿಹಾರ ನೀಡಬೇಕು ಎಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತೆ.
ಒಂದು ವೇಳೆ ಪರಿಹಾರ ನೀಡದೇ ಹೋದರೆ ನಿರಾಶ್ರಿತರ ಪರ ನಿಂತು ಬಹುಜನ ಸಮಾಜ ಪಾರ್ಟಿ ತಹಶೀಲ್ದಾರ್ ಕಚೇರಿ ಮುಂದೆ ಉಗ್ರವಾಗಿ ಪ್ರತಿಭಟನೆ ಹಾಗೂ ಆಹೋರಾತ್ರಿ ಧರಣಿ ಮಾಡಲಾಗುವುದು.
ಬೇಡಿಕೆಗಳುಃ-
ಶಖಾಪೂರ ಎಸ್.ಕೆ. ಗ್ರಾಮದಲ್ಲಿ 2019 ರಲ್ಲಿ ಸುರಿದ ಮಳೆಯಿಂದ ಮನೆಗಳು ಬಿದ್ದಿರುತ್ತವೆ ಸ್ಥಳಕ್ಕೆ ಗ್ರಾಮ ಲೇಕ್ಕಾಧಿಕಾರಿಗಳು ಬೇಟಿ ನೀಡಿ ವರದಿಮಾಡಿ ತಹಸಿಲ್ದಾರ ಕಾರ್ಯಲಯಕ್ಕೆ ಕಳಿಸಿರುತ್ತಾರೆ, ಆದರೆ ಇನ್ನು ಪರಿಹಾರ ನೀಡಿರುವುದಿಲ್ಲ.
04
2) ಅಗತಿರ್ಥ ಮತ್ತು ಶಖಾಪೂರ ಎಸ್.ಕೆ. ಗ್ರಾಮದಲ್ಲಿ ಬಿದ್ದಿರುವ ಮನೆಗಳು ಇವು ಎಲ್ಲಾ ಕಚ್ಚಾ ಮನೆಗಳಾಗಿದ್ದು ಕನಿಷ್ಟ
75000 ರಿಂದ 80000 ರೂ ಗಳ ವರೆಗೆ ಪರಿಹಾರ ನೀಡಬೇಕು.
ಹುಣಸಗಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ನ್ಯಾಯ ಬೇಲೆ ಅಂಗಡಿಯಲ್ಲಿ ಪ್ರತಿ ಪಡಿತರ ಚಿಟಿಗೆ 20
ರೂ.ಗಳಂತೆ ಪಡೆದು ತಲಾ 2 KG ಗಳಂತೆ ಕಟ್ಟ್ ಮಾಡುತ್ತಾರೆ. ಉದಾಹರಣೆ: ಹುಣಸಗಿ
ಕಾಮನಟಗಿ ಗ್ರಾಮದಲ್ಲಿ (SC) ವಾರ್ಡಲ್ಲಿ ಕುಡಿಯುವ ನೀರಿನ ಸರಬರಾಜು ಪೈಪಗಳ ಕಾಮಗಾರಿ ಕಳಪೆಯಾಗಿದ್ದು
ಪುನರ ನಿರ್ಮಾಣ ಮಾಡಿ ಹೋಸ ಪೈಪ ಲೈನ್ ಅಳವಡಿಸಿ ಕುಡಿಯುವ ನೀರು ಪೂರೈಕೆ ಮಾಡಬೇಕು.
ಕಾಮನಟಗಿ ಮತ್ತು ಅಗತಿರ್ಥ ಹಾಗೂ ಹುಣಸಗಿ ಮತ್ತು ಶಖಾಪೂರ ಎಸ್.ಕೆ ಗ್ರಾಮಗಳಲ್ಲಿ ಸಾರ್ವಜನಿಕ ಮಹಿಳಾ
ಶೌಚಾಲಯ ನಿರ್ಮಾಣ ಮಾಡಬೇಕು.
ಹುಣಸಗಿಯಲ್ಲಿ 3-4 ನೇ ವಾರ್ಡಿನಲ್ಲಿ ಮಹಿಳಾ ಶೌಚಾಲಯ ಇದ್ದು ಅವುಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು
ತಮ್ಮಲ್ಲಿ ವಿನಂತಿ.
ರೈತ ವಿರೋದಿ ಕಾಯ್ದೆ ಆಗಿರುವಂತ ಭೂ ಸೂಧಾರಣೆ ಕಾಯ್ದೆ ಮತ್ತು APMC ತಿದ್ದುಪಡಿ ಕಾಯ್ದೆ ಸರಕಾರ ಈ
ಕೂಡಲೆ ಹಿಂಪಡಯಬೇಕು.
ಧನ್ಯವಾದಗಳು
ಇಂತಿ ತಮ್ಮ ವಿಶ್ವಾಸಿಗರು
ಮಾನ್ಯ ಶ್ರೀ ಕೆ.ಬಿ.ವಾಸು ಮಾನ್ಯ ಶ್ರೀ ಎಮ್.ಡಿ.ತಾಜ್ ಬಸವರಾಜ ಎಸ್.ಕಟ್ಟಿಮನಿ
ರಾಜ್ಯ ಉಪಾಧ್ಯಕ್ಷರು ಜಿಲ್ಲಾ ಅಧ್ಯಕ್ಷರು ತಾಲೂಕ ಅಧ್ಯಕ್ಷರು
ಬಹುಜನ ಸಮಾಜ ಪಾರ್ಟಿ ಕರ್ನಾಟಕ ಬಹುಜನ ಸಮಾಜ ಪಾರ್ಟಿ ಯಾದಗಿರಿ ಬಹುಜನ ಸಮಾಜ ಪಾರ್ಟಿ ಹುಣಸಗಿ
ಪರಶುರಾಮ.ಬಿ.ಎಚ್.(ದೊಡಮನಿ) ಶರಣಪ್ಪ ಹನಸೂರ (ವಕಿಲರು) ಜಟ್ಟಿಂಗರಾಯ. ಆರ್.ನಾಯಕ
ಜಿಲ್ಲಾ ಉಪಾಧ್ಯಕ್ಷರು ಯಾದಗಿರಿ ಹಾಗೂ ತಾಲೂಕ ಅಧ್ಯಕ್ಷರು ತಾಲೂಕ ಉಪಾಧ್ಯಕ್ಷರು
ಸುರಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು ಬಹುಜನ ಸಮಾಜ ಪಾರ್ಟಿ ಸುರಪುರ ಬಹುಜನ ಸಮಾಜ ಪಾರ್ಟಿ ಸುರಪುರ
05
ಎಮ್.ಎಸ್.ಮೇಲಿನಮನಿ ನಭಿಸಾಬ ವಜ್ಜಲ ಹುಸೇನ ಸಾಬ ಗಾದಿ
ತಾಲೂಕ ಪ್ರಧಾನ ಕಾರ್ಯದರ್ಶಿ ತಾಲೂಕ ಉಪಾಧ್ಯಕ್ಷರು ತಾಲೂಕ ಪ್ರಧಾನ ಕಾರ್ಯದರ್ಶಿಗಳು
ಬಹುಜನ ಸಮಾಜ ಪಾರ್ಟಿ ಸುರಪುರ ಬಹುಜನ ಸಮಾಜ ಪಾರ್ಟಿ ಹುಣಸಗಿ ಬಹುಜನ ಸಮಾಜ ಪಾರ್ಟಿ ಹುಣಸಗಿ
ಪರಶುರಾಮ ದೋಡಮನಿ ರಾಘು,ಹುಣಸಗಿ ಭೀಮಶೆಪ್ಪ ಗಡದನ್ನಿ
ತಾಲೂಕ ಕಾರ್ಯದರ್ಶಿ ತಾಲೂಕ ಉಪಾಧ್ಯಕ್ಷರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು
ಬಹುಜನ ಸಮಾಜ ಪಾರ್ಟಿ ಸುರಪುರ ಬಹುಜನ ಸಮಾಜ ಪಾರ್ಟಿ ಹುಣಸಗಿ ಬಹುಜನ ಸಮಾಜ ಪಾರ್ಟಿ ಯಾದಗಿರಿ
ಮಹ್ಮದ ದಲಾಯತ್
ಜಿಲ್ಲಾ ಕಾರ್ಯದರ್ಶಿಗಳು
ಬಹುಜನ ಸಮಾಜ ಪಾರ್ಟಿ ಯಾದಗಿರಿ
ಪ್ರತಿಗಳು:-
ಮಾನ್ಯ ಕಂಧಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು ಇವರಿಗೆ.
ಮಾನ್ಯ ಮುಖ್ಯಕಾರ್ಯನಿರ್ವಾಹಕ ಅದಿಕಾರಿಗಳು ಯಾದಗಿರಿ ಇವರಿಗೆ.
ಮಾನ್ಯ ಸಹಾಯಕ ಆಯಕ್ತ ಅಧಿಕಾರಿಗಳು ಯಾದಗಿರಿ ಇವರಿಗೆ.
ಮಾನ್ಯ ತಹಸಿಲ್ದಾರ ಹಾಗೂ ತಾಲೂಕು ದಂಡಾಧಿಕಾರಿಗಳು ಕಾರ್ಯಲಯಾ ಹುಣಸಗಿ ಇವರಿಗೆ.
ಮಾನ್ಯ ತಹಸಿಲ್ದಾರ ಹಾಗೂ ತಾಲೂಕು ದಂಡಾಧಿಕಾರಿಗಳು ಕಾರ್ಯಲಯಾ ಸುರಪುರ ಇವರಿಗೆ.
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹುಣಸಗಿ ಇವರಿಗೆ.
ಮಾನ್ಯ ವರದಿಗಾರರು ________ ಕನ್ನಡ ದಿನಪತ್ರಿಕೆ