ಕೆ.ಜಿ ಹಳ್ಳಿ ಪ್ರಕರಣ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಬ್ದುಲ್ ವಾಜೀದ್ ಪಾಷಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ವಾಜೀದ್ನನ್ನು ಬಂಧಿಸೋಕೆ ಸಿಸಿಬಿ ಅಧಿಕಾರಿಗಳು ಆತನ ಮನೆ ಬಳಿ ಹೋಗಿದ್ದರು. ಈ ವೇಳೆ ಮನೆಯೊಳಗೇ ಇದ್ದ ವಾಜೀದ್, ಮನೆಯಲ್ಲಿ ಯಾರು ಇಲ್ಲ ಎಂದು ಬಿಂಬಿಸಲು ಹೊರಗಡೆಯಿಂದ ಬೀಗ ಹಾಕಿಸಿದ್ದ.
ಮೊದಲು ಮನೆಗೆ ಬೀಗ ಹಾಕಿರುವುದು ನೋಡಿ ಸುಮ್ಮನಾಗಿದ್ದ ಅಧಿಕಾರಿಗಳು, ಬಳಿಕ ಅನುಮಾನಗೊಂಡು ವಾಜೀದ್ ಮೊಬೈಲ್ಗೆ ಕರೆ ಮಾಡಿದ್ದಾರೆ. ಆಗ ಮನೆಯೊಳಗಿಂದ ರಿಂಗ್ಟೋನ್ ಸೌಂಡ್ ಕೇಳಿದ ಅಧಿಕಾರಿಗಳು ಕೂಡಲೇ ಬಾಗಿಲು ತೆರೆಯಬೇಕು, ಇಲ್ಲವಾದಲ್ಲಿ ನಾವು ಬಾಗಿಲು ಒಡೆಯುತ್ತೇವೆ ಎಂದಿದ್ದಾರೆ. ಇದಕ್ಕೆ ಹೆದರಿದ ವಾಜೀದ್ ಮನೆ ಬಾಗಿಲು ತೆರೆದು ಸರೆಂಡರ್ ಆಗಿದ್ದಾನೆ.
ವಾಟ್ಸ್ಆಯಪ್ ಸಂದೇಶ ನೋಡಿ ಪೊಲೀಸರಿಗೇ ಶಾಕ್
ಇನ್ನು ಕೃತ್ಯಕ್ಕೆ ಸಂಬಂಧಿಸಿದ ವಾಟ್ಸ್ಯಾಪ್ ಸಂದೇಶಗಳನ್ನ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಮಹಿಳೆಯರನ್ನು ಮುಂದೆ ಬಿಟ್ಟು ಗಲಾಟೆ ಎಬ್ಬಿಸಿ, ಒಂದು ವೇಳೆ ಮಹಿಳೆಯ ಮೇಲೆ ಹಲ್ಲೆಯಾದ್ರೆ, ಕಾನೂನಿನ ಮೂಲಕ ಹೋರಾಟ ಮಾಡಿ, ಮಾನವ ಹಕ್ಕುಗಳ ಆಯೋಗಕ್ಕೆ ಹೋಗಬಹುದು. ತಲೆ ಕೆಡಿಸಿಕೊಳ್ಳಬೇಡಿ ಗಲಾಟೆ ಎಬ್ಬಿಸಿ ಎನ್ನುವ ಮೇಸೇಜ್ ಆರೋಪಿಗಳ ಮೊಬೈಲ್ನಲ್ಲಿ ಹರಿದಾಡಿತ್ತು ಎನ್ನಲಾಗಿದೆ. ಈ ಮೆಸೇಜ್ ಗಳನ್ನ ಆಧರಿಸಿ ಸಿಸಿಬಿ ಅಧಿಕಾರಿಗಳು 300 ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣ ಸಿಸಿಬಿ ಅಧಿಕಾರಿಗಳಿಗೆ ಹಸ್ತಾಂತರವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಗಲ್ಲಿ ಗಲ್ಲಿಗೆ ನುಗ್ಗಿ ಆರೋಪಿಗಳನ್ನು ಹಿಡಿದಿದ್ದಾರೆ. ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೊರಗೆಳಿದಿದ್ದಾರೆ. ಅಧಿಕಾರಿಗಳು ಜನರ ಮಧ್ಯೆಯೇ ಬೆರತು ಒಬ್ಬೊಬ್ಬರಾಗಿ ಆರೋಪಿಗಳನ್ನು ಹಿಡಿದು ತರ್ತಿದ್ದಾರೆ.