ಮನೆ-ಕಾರು ಖರೀದಿಸುವವರಿಗೊಂದು ಶುಭ ಸುದ್ದಿ.!

0

ದೀಪಾವಳಿ ದಸರಾ ಬಂತಂದ್ರೆ ಸಾಕು ಬ್ಯಾಂಕ್‌ಗಳಿಂದ ಅನೇಕ ಲೋನ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತವೆ. ಇದೀಗ ಈ ವರ್ಷ ಕೊರೊನಾದಿಂದಾದ ಆರ್ಥಿಕ ಹೊಡೆತದ ನಡುವೆಯೂ ಗ್ರಾಹಕರಿಗೆ ಒಂದೊಳ್ಳೆ ಅವಕಾಶವನ್ನು ನೀಡುತ್ತಿವೆ ಬ್ಯಾಂಕ್‌ಗಳು. ನೀವೇನಾದ್ರೂ ಕಾರ್ ಅಥವಾ ಮನೆ ಕೊಂಡುಕೊಳ್ಳಬೇಕು ಅಂತಿದ್ದರೆ ನಿಮಗಿದೋ ಒಂದು ಶುಭ ಸುದ್ದಿ ಇಲ್ಲಿದೆ.

ಹೌದು, ದಸರಾ, ದೀಪಾವಳಿ ಹಬ್ಬಗಳ ಸಂದರ್ಭಗಳಲ್ಲಿ ಕಾರ್ ಅಥವಾ ಮನೆ ಖರೀದಿಸುವವರಿಗೆ ಬಂಪರ್ ರಿಯಾಯಿತಿ ನೀಡಲು ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕುಗಳು ಮುಂದಾಗಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಫೆಸ್ಟಿವಲ್ ಟ್ರೀಟ್ಸ್ 2.0 ಅನ್ನೋ ಹೆಸರಿನಲ್ಲಿ ರಿಯಾಯಿತಿ ನೀಡಿದರೆ, ಐಸಿಐಸಿಐ ಬ್ಯಾಂಕ್ ಹಬ್ಬದ ಕೊಡುಗೆಗಳನ್ನು ಈ ಮೂಲಕ ನೀಡುತ್ತಿದೆ.

ಮನೆ ಮೇಲೆ ಸಾಲ, ಕಾರ್ ಸಾಲ, ಸಂಸ್ಕರಣಾ ಶುಲ್ಕದ ಮೇಲಿನ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್, ಉಡುಗೊರೆ ಚೀಟಿಗಳು, ಕಡಿಮೆ ಇಎಂಐ ಸೇರಿದಂತೆ ಹಲವಾರು ರಿಯಾಯಿತಿಗಳನ್ನು ನೀಡುತ್ತಿವೆ. ಹಾಗಾದ್ರೆ ಇನ್ಯಾಕೆ ತಡ ನೀವು ಮನೆ, ಕಾರು, ಐಷಾರಾಮಿ ವಸ್ತುಗಳನ್ನು ಕೊಳ್ಳಬೇಕು ಅಂದರೆ ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here