ಮರಾಠಿ ಪ್ರೀತಿ ತೋರಿಸಿದ ಜವಳಿಖಾತೆ ಸಚೀವ ಶ್ರೀಮಂತ ಪಾಟೀಲ ವಿರುದ್ದ ಪ್ರತಿಭಟನೆ. ಪ್ರತಿಭಟನಾಕಾರನ್ನು ವಶಕ್ಕೆ ಪಡೆದ ಪೋಲಿಸರು

0

ಮಹಾರಾಷ್ಟ್ರ ಕೃಷಿ ಸಚೀವ ವಿಶ್ವಜಿತ ಕದಮ್ ಅವರ ಸಕ್ಕರೆ ಕಾರ್ಖಾನೆ ಭೂಮಿ ಪೂಜೆ ವೇಳೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಮರಾಠಿ ಭಾಷಣ ಮಾಡಿದ್ದ ಜವಳಿಖಾತೆ ಸಚೀವ ಶ್ರೀಮಂತ ಪಾಟೀಲ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ‌ನಡೆದಿದೆ.

ಕನ್ನಡದ ನೆಲದಲ್ಲಿ ಅನ್ನ ಉಂಡು ಕನ್ನಡ ದ್ರೋಹಿ ಚಟುವಟಿಕೆಯಲ್ಲಿ ಶ್ರೀಮಂತ ಪಾಟೀಲ ಭಾಗಿಯಾಗುತ್ತಿದ್ದಾರೆ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು ಮತ್ತು ಶಾಸಕ ಸ್ಥಾನ ರದ್ದುಗೊಳಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಬಸನಗೌಡ ಬಮ್ನಾಳ ಪಾಟೀಲ ಆಗ್ರಹಿಸಿದರು.

ಇನ್ನೂ ಶ್ರೀಮಂತ ಪಾಟೀಲ ಮರಾಠಿ ಪ್ರೇಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯೂ ಪೋಸ್ಟಿಂಗ್ ವಾರ್ ಗಳು ನಡೆಯುತ್ತಿದ್ದು ಬೆಂಗಳೂರು ಸೇರಿದ ಶ್ರೀಮಂತ ಪಾಟೀಲ ಪಕ್ಷ ದ ಸಂಘಟನೆಗೂ ಹಿಂದೇಟು ಹಾಕುತ್ತಿದ್ದಾರೆ.ಇಂತಹವರಿಗೆ ಮತಹಾಕಿ ತಪ್ಪು ಮಾಡಿದ್ದೆವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗುತ್ತಿವೆ.

ಅಷ್ಟೇ ಅಲ್ಲದೆ
ಕಾಗವಾಡ ಶಾಸಕ ಹಾಗೂ ಜವಳಿಖಾತೆ ಸಚೀವ ಶ್ರೀಮಂತ ಪಾಟೀಲ ಕನ್ನಡಿಗರ ಮತಪಡೆದು ಕರ್ನಾಟಕದ ಸಚೀವರಾಗಿದ್ದು ಕರ್ನಾಟಕದ ಗಡಿಭಾಗದಲ್ಲಿ ಮರಾಠಿಮಯ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಶ್ರೀಮಂತ ಪಾಟೀಲ ತಮ್ಮ ಅಥಣಿ ಫಾರ್ಮರ್ಸ ಸಕ್ಕರೆ ಕಾರ್ಖಾನೆಯಲ್ಲಿಯು ಮರಾಠಿಗರಿಗೆ ಕೆಲಸ ಕೊಡುವ ಮೂಲಕ ಕನ್ನಡಿಗರ ಅನ್ನ ಕಸಿಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ..

ಈ ವೇಳೆ ರಾಜ್ಯ ಹೆದ್ದಾರಿ ತಡೆದ ಪ್ರತಿಭಟನಾಕಾರರನ್ನು ಅಥಣಿ ಪೋಲಿಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದು ಜವಳಿ ಖಾತೆ ಸಚೀವ ಕನ್ನಡ ವಿರೋಧಿ ಆಗಿದ್ದು ಕನ್ನಡದ ಅನ್ನ ಉಂಡು ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಯ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಶ್ರೀಮಂತ ಪಾಟೀಲ ವಿರುದ್ದ ಗಂಭೀರ ಆರೋಪಗಳು ಕೇಳಿಬಂದಿವೆ. ಜವಳಿಖಾತೆ ಸಚೀವ ಶ್ರೀಮಂತ ಪಾಟೀಲ ತಮ್ಮ ಹುದ್ದೆಗೆ ಕೂಡಲೇ ರಾಜಿನಾಮೆ ಕೊಡಬೇಕು ಇಲ್ಲದಿದ್ದರೆ ರಾಜ್ಯ ಪಾಲರು ಅವರ ಶಾಸಕ ಸ್ಥಾನ ರದ್ದುಗೊಳಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here