ಮರೆಯಲಾಗದ ಆದರ್ಶ; ಎ.ಕೆ. ಸುಬ್ಬಯ್ಯ ನಮ್ಮಿಂದ ದೂರವಾಗಿ ಒಂದು ವರ್ಷ ವೆಬಿನಾರ್ ಮೂಲಕ ನುಡಿನಮನ

0

ಎ.ಕೆ. ಸುಬ್ಬಯ್ಯ ನಮ್ಮಿಂದ ದೂರವಾಗಿ ಒಂದು ವರ್ಷ ವೆಬಿನಾರ್ ಮೂಲಕ ನುಡಿ ನಮನ

ಕನ್ನಡನಾಡು ಕಂಡ ಅಪರೂಪದ ರಾಜಕೀಯ ಮುತ್ಸದಿ ಎ.ಕೆ. ಸುಬ್ಬಯ್ಯನವರು ನಮ್ಮಿಂದ ದೂರವಾಗಿ ಅಗಸ್ಟ್ 27 ಕ್ಕೆ ಒಂದು ವರ್ಷವಾಗುತ್ತದೆ.

ಎ.ಕೆ. ಸುಬ್ಬಯ್ಯ ನವರು ಪ್ರಾಮಾಣಿಕ-ನಿಷ್ಠುರ ರಾಜಕಾರಣಿ. ಆದರ್ಶದ ಬದುಕಿಗೊಂದು ಮಾದರಿ. ಮಾತಿಗೂ, ಬದುಕಿಗೂ ಅಂತರವೇ ಇಲ್ಲದ ಕನ್ನಡಿಯ ವ್ಯಕ್ತಿತ್ವದವರು. ಕೆಲ ಮಾಜಿಮುಖ್ಯ ಮಂತ್ರಿಗಳನ್ನೂ ಒಳಗೊಂಡಂತೆ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದವರು. ಅಪ್ಪಟ ವಿಚಾರವಾದಿ-ಜಾತ್ಯಾತೀತ ಜೀವಿ.ನೊಂದವರ ಕಂಡು ಕರಗಿ ಬಿಡುವ ಮಾನವೀಯ ವ್ಯಕ್ತಿತ್ವದವರು. ಎಂದಿಗೂ ರಾಜಿಯಾಗದ ದಿಟ್ಟ ಹೋರಾಟಗಾರ.ತೀವ್ರ ಅನಾರೋಗ್ಯದ ಕೊನೆಯ ದಿನಗಳಲ್ಲಿ ಕೂಡ ನೊಂದವರ ಪರವಾದ ಚಳವಳಿಗಳಲ್ಲಿ ತೊಡಗಿಕೊಂಡಿದ್ದರು.

 

ಅವರ ಬದುಕು ನಮಗೊಂದು ಆದರ್ಶ.

ಅವರಿಗೆ ನಮ್ಮ ನುಡಿನಮನ.

ದಿನಾಂಕ: ಅಗಸ್ಟ್ 25

ಸಮಯ: ಸಂಜೆ 5 ರಿಂದ 7 ಗಂಟೆ

ನಮ್ಮೊಂದಿಗೆ

* ತೀಸ್ತಾ ಸೆಟಲ್ ವಾದ್,

ಖ್ಯಾತ ಮಾನವಹಕ್ಕು ಹೋರಾಟಗಾರರು

*ರಮೇಶ್ ಕುಮಾರ್,

ಮಾಜಿ ವಿಧಾನ ಸಭಾದ್ಯಕ್ಷರು,

ಮಾಜಿ ಮಂತ್ರಿಗಳು

*ಎ.ಎಸ್. ಪೊನ್ನಣ್ಣ,

ಮಾಜಿ ಹೆಚ್ಚುವರಿ ಅಡ್ವೊಕೆಟ್ ಜನರಲ್

*ಯು.ಟಿ. ಖಾದರ್,

ಮಾಜಿ ಮಂತ್ರಿಗಳು, ಶಾಸಕರು , ಮಂಗಳೂರು

*ರಹಮತ್ ತರಿಕೆರೆ,

ಸಂಸ್ಕೃತಿ ಚಿಂತಕರು

*ನೂರ್ ಶ್ರೀಧರ್,

ಜನಪರ ಹೋರಾಟಗಾರರು

ಸಮನ್ವಯ: ಕೆ.ಎಲ್. ಅಶೋಕ್

LEAVE A REPLY

Please enter your comment!
Please enter your name here