ಮಲೆಮಹದೇಶ್ವರ ಈಗಲೂ ಕೋಟ್ಯಧಿಪತಿಯೇ..

0

ಕೊರೊನಾ ಭೀತಿಯ ನಡುವೆ ಮತ್ತೆ 82 ದಿನಗಳಲ್ಲಿ ಮಲೆ ಮಹದೇಶ್ವರ ಕೋಟ್ಯಧಿಪತಿಯಾಗಿಯೇ ಮುಂದುವರೆದಿರುವುದು ಗಮನಾರ್ಹವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ ನಡೆದಿದ್ದು, ಹುಂಡಿಯಲ್ಲಿ ಒಂದು ಕೋಟಿ ನಲವತ್ತೇಳು ಲಕ್ಷದ ಮುನ್ನೂರ ನಲವತ್ತೆಂಟು ರೂ ಸಂಗ್ರಹವಾಗಿದೆ. ಹದಿನೇಳು ಗ್ರಾಂ ಚಿನ್ನ, ಒಂಬೈನೂರ ಎಂಬತ್ತೈದು ಗ್ರಾಂ ಬೆಳ್ಳಿ ಪದಾರ್ಥ ಸಂಗ್ರಹವಾಗಿದೆ.

ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ಸಾಲೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿರವರ ಉಪಸ್ಥಿತಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿಗಳ ಮೇಲುಸ್ತುವಾರಿಯಲ್ಲಿ ನಡೆಯಿತು. ಉಪ-ಕಾರ್ಯದರ್ಶಿ ಬಸವರಾಜು ಅವರ ಮಾರ್ಗದರ್ಶನದಲ್ಲಿ ಅಭಿಯಂತರರೊಡಗೂಡಿ ಎಲ್ಲ ಸಿಬ್ಬಂದಿ ಹುಂಡಿ ಎಣಿಕೆ ಮಾಡಿದರು. ಈ ಹಿಂದೆ ಜೂನ್ 26 ರಂದು ಹುಂಡಿ ಎಣಿಕೆ ನಡೆದಿತ್ತು. ಆ ನಂತರ 82 ದಿನಗಳ ಬಳಿಕ ಹುಂಡಿ ತೆರೆಯಲಾಯಿತು.

ಈ ಹಿಂದೆ ಒಂದು ತಿಂಗಳಿಗೆ ಸುಮಾರು 1.5 ಕೋಟಿ ರೂ. ಸಂಗ್ರಹವಾಗುತ್ತಿದ್ದು, ಇದೀಗ 82 ದಿನಗಳಿಗೆ ಸುಮಾರು 1.40 ಕೋಟಿ ಸಂಗ್ರಹವಾಗಿರುವುದು ತೀರಾ ಕಡಿಮೆಯೇ ಆದರೂ ಕೊರೋನಾದ ನಡುವೆಯೂ ಇಷ್ಟೊಂದು ಹಣ ಸಂಗ್ರವಾಗಿರುವುದು ಮಲೆಮಹದೇಶ್ವರನ ಮೇಲೆ ಭಕ್ತರಿಗೆ ಇರುವ ಭಕ್ತಿಯೇ ಕಾರಣ ಎಂದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here