ಮಲ್ಪೆ: ಸೀಲ್‌ಡೌನ್ ಮಾಡಲಾದ ಮನೆಯಲ್ಲಿ 2 ತಿಂಗಳ ಬಳಿಕ ಕೊಳೆತ ಮೃತದೇಹ ಪತ್ತೆ

0

ಸೀಲ್‌ಡೌನ್ ಮಾಡಲಾಗಿದ್ದ ಮನೆಯೊಂದರಲ್ಲಿ ಎರಡು ತಿಂಗಳ ಬಳಿಕ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೆಮ್ಮಣ್ಣು ಸಮೀಪದ ಎಡಬೆಟ್ಟು ಎಂಬಲ್ಲಿ ಇಂದು ನಡೆದಿದೆ.

ಮೃತರನ್ನು ಶೇಖರ ಪೂಜಾರಿ (55) ಎಂದು ಗುರುತಿಸಲಾಗಿದೆ.

ಮುಂಬೈನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಇವರನ್ನು, ಅತಿಯಾದ ಮದ್ಯ ಸೇವಿಸಿ ತೊಂದರೆ ಕೊಡುತ್ತಿದ್ದ ಕಾರಣಕ್ಕೆ 12 ವರ್ಷಗಳ ಹಿಂದೆ ಹೆಂಡತಿ ಮತ್ತು ಮಕ್ಕಳ ಬಿಟ್ಟು ಹೋಗಿದ್ದರು. ಲಾಕ್‌ಡೌನ್ ಕಾರಣ ಮುಂಬೈಯಿಂದ ಜು.20ರಂದು ಊರಿಗೆ ಬಂದ ಹಿನ್ನೆಲೆಯಲ್ಲಿ ಜು.21ರಂದು ಅಧಿಕಾರಿಗಳು ಇವರ ಮನೆ ಯನ್ನು ಸೀಲ್ಡೌನ್ ಮಾಡಿದ್ದರು. ಬಳಿಕ ಅವರು ಯಾರ ಸಂಪರ್ಕಕ್ಕೂ ಬಂದಿರಲಿಲ್ಲ. ಇತ್ತೀಚೆಗೆ ಉಂಟಾದ ಪ್ರವಾಹದಿಂದ ಇವರ ಮನೆಗೂ ಹಾನಿಯಾಗಿರುವ ಸಾಧ್ಯತೆ ಇರುವುದರಿಂದ ಮನೆಯನ್ನು ಪರೀಶೀಲಿಸಲು ಹೋದ ಅಧಿಕಾರಿಗಳಿಗೆ ಮೃತದೇಹ ಕಂಡು ಬಂದಿದೆ. ಅತಿಯಾದ ಮಧ್ಯಪಾನ ಅಥವಾ ಇನ್ಯಾವುದೋ ಕಾರಣದಿಂದ ಇವರು ಎರಡು ತಿಂಗಳ ಅವಧಿಯಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here