ಮಳೆಯಿಂದ ಇಂಗ್ಲೆಂಡ್, ಪಾಕಿಸ್ಥಾನ ನಡುವಿನ ಮೊದಲ ಟಿ20 ಪಂದ್ಯ ರದ್ದು

0

ಇಂಗ್ಲೆಂಡ್‌ ಮತ್ತು ಪ್ರವಾಸಿ ಪಾಕಿಸ್ಥಾನ ನಡುವಿನ ಮೊದಲ ಟಿ20 ಪಂದ್ಯ ಭಾರೀ ಮಳೆಯಿಂದ ರದ್ದುಗೊಂಡಿದೆ.

ಶುಕ್ರವಾರ ರಾತ್ರಿ ಇಲ್ಲಿನ “ಎಮಿರೇಟ್ಸ್‌ ಓಲ್ಡ್‌ ಟ್ರಾಫ‌ರ್ಡ್‌’ ಅಂಗಳದಲ್ಲಿ ನಡೆಯಬೇಕಿದ್ದ ಮುಖಾಮುಖೀ ಕೇವಲ 16.1 ಓವರ್‌ಗಳಿಗ ಸೀಮಿತಗೊಂಡಿತು. ಆಗ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 6 ವಿಕೆಟಿಗೆ 131 ರನ್‌ ಮಾಡಿತ್ತು. ಈ ವೇಳೆ ಸುರಿದ ಮಳೆಯಿಂದ ಆಟವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ರಾತ್ರಿ 9 ಗಂಟೆಗೆ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.

ಇಂಗ್ಲೆಂಡಿನ ಆರಂಭಕಾರ ಟಾಮ್‌ ಬ್ಯಾಂಟನ್‌ 42 ಎಸೆತಗಳಿಂದ 71 ರನ್‌ ಸಿಡಿಸಿ ಅಬ್ಬರಿಸಿದರು. ಇದರಲ್ಲಿ 4 ಬೌಂಡರಿ, 5 ಸಿಕ್ಸರ್‌ ಒಳಗೊಂಡಿತ್ತು. ಇಮಾದ್‌ ವಾಸಿಮ್‌ ಮತ್ತು ಶಾದಾಬ್‌ ಖಾನ್‌ ತಲಾ 2 ವಿಕೆಟ್‌ ಉರುಳಿಸಿದರು.

ಸರಣಿಯ ದ್ವಿತೀಯ ಪಂದ್ಯ ರವಿವಾರ ಇದೇ ಅಂಗಳದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here