ಮಳೆರಾಯನ ಕೃಪಾಶೀವಾ೯ದ ಲಭ್ಯವಾಗಿದೆ,ತಾಲೂಕಿನಾಧ್ಯಂತ ಎಲ್ಲಾ ಕೆರೆ ಕಟ್ಟೆಗಳು ಜಲಾವೃತಗೊಂಡು

0

ರಾಮದುರ್ಗ ಕೆರೆ ಕೋಡಿಬಿದ್ದು  ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ

ಬಹುದೊಡ್ಡ ಕೆರೆಗಳಲ್ಲೊಂದಾದ ರಾಮದುರ್ಗ ಕೆರೆ,ಕೆಲದಿನಗಳಿಂದ ನಿರಂತರವಾಗಿ ಬಂದ ಮಳೆಯಿಂದಾಗಿ

ರಾಮದುರ್ಗ ಕೆರೆ ತುಂಬಿ ಕೋಡಿ ಬಿದ್ದಿದೆ.ಇದು ರಾಮದುರ್ಗ ಮಾತ್ರವಲ್ಲದೆ ಸುತ್ತಲಿನ ರೈತರಲ್ಲಿ ಅತೀವ

ಹಷ೯ವನ್ನುಂಟು ಮಾಡಿದೆ.ಶನಿವಾರದಂದು ಒತ್ತಾರೆದ್ದು ಕೆರೆಯ ಕೋಡಿಯ ಮೇಲೆ ನೀರುಹರಿಯುವ

ಮನಮೋಹಕ ದ್ರುಶ್ಯವನ್ನು, ಕಣ್ಣುತುಂಬಿಸಿಕೊಳ್ಳಲು ಗ್ರಾಮಸ್ಥರು ಕೆರೆಯತ್ತ ಲಗ್ಗೆ ಹಾಕುತ್ತಿದ್ದಾರೆ.ಈ

ಸನ್ನಿವೇಶಗಳನ್ನು ಗುಡೇಕೋಟೆ ಪೊಲೀಸ್ ಠಾಣೆಯ ಪೇದೆಗಳಾದ ಮಹಾಬಲೇಶ್ವರಪ್ಪ ಹಾಗೂ

ಅಂಜಿನಪ್ಪನವರು ಸೆರೆಹಿಡಿದಿದ್ದಾರೆ.ತಾಲೂಕಿನ ಪ್ರಮುಖ ಕೆರೆಗಳ ಪಟ್ಟಿಯಲ್ಲಿರುವ ರಾಮದುರ್ಗ ಕೆರೆ ಕೋಡಿ

ಬಿದ್ದಿದ್ದು,ಇದು ತಾಲೂಕಿನ ಕ್ಷೇಮದ ಸಂಖೇತವೆಂದೇ ಭಾವಿಸಲಾಗುತ್ತದೆ.ಆದುದರಿಂದಾಗಿ ಗ್ರಾಮ ಹಾಗೂ

ತಾಲೂಕಿನೆಲ್ಲೆಡೆಯ ರೈತರಲ್ಲಿ ಮಂದಹಾಸ ಮೂಡಿಸಿದೆ.ತಾಲೂಕಿನ ಸಮಸ್ಥ ರೈತರಿಗೆ ಪ್ರಸಕ್ತ ವಷ೯ವು

ಮಳೆರಾಯನ ಕೃಪಾಶೀವಾ೯ದ ಲಭ್ಯವಾಗಿದೆ,ತಾಲೂಕಿನಾಧ್ಯಂತ ಎಲ್ಲಾ ಕೆರೆ ಕಟ್ಟೆಗಳು ಜಲಾವೃತಗೊಂಡು

ಕೋಡಿತುಂಬಿ ಹಿಯಲಿವೆ ಎಂಬ ನಂಬುಗೆ ತಾಲೂಕಿನ ಜನತೆಯದ್ದು ಹಾಗೂ ರೈತರದ್ದು.✍️ ವಂದೇ ಮಾತರಂ

ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

LEAVE A REPLY

Please enter your comment!
Please enter your name here