ಮಹತ್ವದ ನಿರ್ಧಾರ: PUBG ಬೆನ್ನಲ್ಲೇ ಈ ರಾಜ್ಯದಲ್ಲಿ ರಮ್ಮಿ, ಪೋಕರ್ ಬ್ಯಾನ್ !

0

ಬುಧವಾರವಷ್ಟೇ ಕೇಂದ್ರ ಸರ್ಕಾರ ದೇಶದ ಭದ್ರತೆ ದೃಷ್ಟಿಯಿಂದ ಪಬ್ ಜಿ ಸೇರಿದಂತೆ ಹಲವಾರು ಜನಪ್ರಿಯ ಆಯಪ್ ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಇದೀಗ ಆಂಧ್ರಪ್ರದೇಶ ಸರ್ಕಾರ ತನ್ನ ರಾಜ್ಯದಲ್ಲಿ ರಮ್ಮಿ, ಪೋಕರ್ ಗೇಮ್ ಗಳನ್ನು ನಿಷೇಧ ಮಾಡಿದೆ.

ಯುವಜನತೆಯ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಆನ್ ಲೈನ್ ಗೇಮ್ ಗಳು ಯುವಜನಾಂಗವನ್ನು ತಪ್ಪು ದಾರಿಯಡೆಗೆ ಎಳೆಯುತ್ತಿದೆ ಎಂದು ಆಂಧ್ರ ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆನ್ ಲೈನ್ ಜೂಜಾಟವು ಯುವಕರ ದಾರಿ ತಪ್ಪಿಸುತ್ತಿದೆ. ಹೀಗಾಗಿ ಎಲ್ಲಾ ತೆರನಾದ ಆನ್ ಲೈನ್ ಜೂಜಾಟವನ್ನು ಆಂಧ್ರದಲ್ಲಿ ನಿಷೇಧಿಸಲಾಗುವುದು ಎಂದು ಸಚಿವ ವೆಂಕಟರಾಮಯ್ಯ ತಿಳಿಸಿದ್ದಾರೆ.

ಮಾತ್ರವಲ್ಲದೆ ಆನ್ ಲೈನ್ ಜೂಜಾಟ ಸಂಘಟಕರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುವುದು. ನಿಷೇಧದ ನಂತರವೂ ಈ ಅಪ್ಲಿಕೇಷನ್ ಗಳನ್ನು ಯಾರಾದರೂ ಬಳಸುತ್ತಿದ್ದರೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here