ಮಹಿಳೆಯರು ಪ್ರಾಮಾಣಿಕತೆಗೆ ಹೆಸರು ವಾಸಿಯಾಗಿದ್ದು ಸಾಲ ಪಡೆದ ನಂತರ ಅದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸುವ ಮೂಲಕ ಇತರರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಸ್ಪೀಕರ್ ಹಾಗೂ ಶಾಸಕ ಕೆ ಆರ್ ರಮೇಶ್ ಕುಮಾರ್ ರವರು ಕಿವಿಮಾತು ಹೇಳಿದರು.

0

ಮಹಿಳೆಯರು ಪ್ರಾಮಾಣಿಕತೆಗೆ ಹೆಸರು ವಾಸಿಯಾಗಿದ್ದು ಸಾಲ ಪಡೆದ ನಂತರ ಅದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸುವ ಮೂಲಕ ಇತರರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಸ್ಪೀಕರ್ ಹಾಗೂ ಶಾಸಕ ಕೆ ಆರ್ ರಮೇಶ್ ಕುಮಾರ್ ರವರು ಕಿವಿಮಾತು ಹೇಳಿದರು.

ಅವರು ಇಂದು ತಾಲ್ಲೂಕಿನ ಲಕ್ಷ್ಮೀಪುರ ವ್ಯವಸಾಯ ಸೇವಾ ಸಹಕಾರ ಸಂಘದಡಿಯಲ್ಲಿ ಲಕ್ಷ್ಮೀಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸೇರಿದ 72 ಮಹಿಳಾ ಸ್ವಸಹಾಯ ಸಂಘಗಳಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿ.ಸಿ.ಸಿ.ಬ್ಯಾಂಕ್ ವತಿಯಿಂದ 3 ಕೋಟಿ 65 ಲಕ್ಷ ರೂಪಾಯಿಗಳ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನನ್ನ ತಾಯಿ ದೈವಾದೀನರಾಗಿದ್ದರೂ ನಿಮ್ಮಗಳಲ್ಲಿ ನನ್ನ ತಾಯಿಯನ್ನು ಕಾಣುತ್ತಿದ್ದೇನೆ, ಕರೋನ ಕಾಯಿಲೆ ಕಾರಣ ಸಾಲ ವಿತರಣೆ ತಡವಾಗಿದೆ, ಆದರೂ ನಿಮಗೆ ತೊಂದರೆ ಆಗದಂತೆ ಬ್ಯಾಂಕ್ ನೋಡಿ ಕೊಳ್ಳುತ್ತದೆಯೆಂದರು.

ಬಡ್ಡಿ ಇಲ್ಲದೆ ಯಾವುದೇ ಬ್ಯಾಂಕ್, ಖಾಸಗಿಯವರು ಸಾಲ ನೀಡುವುದಿಲ್ಲ, ಡಿ.ಸಿ.ಸಿ.ಬ್ಯಾಂಕ್ ಮಾತ್ರ ತಮ್ಮನ್ನು ಗೌರವದಿಂದ ಆದರಿಸಿ ಸಾಲ ನೀಡುತ್ತಿದ್ದು,ಬ್ಯಾಂಕ್ ನ್ನು ಬೆಳೆಸುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದರು.

ಡಿಸಿಸಿ ‌‌‌ಬ್ಯಾಂಕ್ ನ ಅಧ್ಯಕ್ಷರಾದ ಬ್ಯಾಲಹಳ್ಳಿ ಎಂ ಗೋವಿಂದಗೌಡರು ಮಾತನಾಡುತ್ತಾ ಬಡತನ ಶಾಪವಲ್ಲ, ಅದನ್ನು ನಿವಾರಿಸಿಕೊಳ್ಳವುದು ಜಾಣತನವಾಗಿದ್ದು, ಸಾಲ ಪಡೆದು ಆರ್ಥಿಕವಾಗಿ ಮುಂದುವರೆಯಬೇಕೆಂದ ಅವರು, ಬಡತನ ನಿರ್ಮೂಲನೆ ಮಾಡಲು ಶಕ್ತಿ ಮೀರಿ ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು.

ಪ್ರತಿ ಬಡವರಿಗೆ ಸಾಲ ನೀಡಬೇಕೆಂಬ ಅಭಿಲಾಷೆ ಡಿ.ಸಿ.ಸಿ.ಬ್ಯಾಂಕ್ ದಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದು ಲಕ್ಷ ಸಾಲ ವಿತರಣೆ ಮಾಡಲು ಚಿಂತಿಸಲಾಗಿದೆಯೆಂದರಲ್ಲದೆ ಡಿ.ಸಿ.ಸಿ. ಬ್ಯಾಂಕ್ ಮಹಿಳೆಯರ ತವರು ಮನೆಯಂತೆ ಸದಾ ನಿಮ್ಮಗಳ ಆರ್ಶೀವಾದ ಬ್ಯಾಂಕ್ ಮೇಲೆ ಇರಬೇಕೆಂದರು.

ಕಾರ್ಯಕ್ರಮದಲ್ಲಿ ಡಿ.ಸಿ.ಸಿ.ಬ್ಯಾಂಕ್ ತಾಲೂಕು ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ, ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಆರ್. ವೆಂಕಟಶಿವಾರೆಡ್ಡಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಾಬುರೆಡ್ಡಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಗಳಾದ ರೆಡ್ಡಪ್ಪ, ರವಣಪ್ಪ, ಎಂ.ಮುನಿ ಯಪ್ಪ, ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here