ಇದೀಗ ರಾಷ್ಟ್ರವ್ಯಾಪಿ ಚರ್ಚೆಯಲ್ಲಿರುವ ನಟಿ ಎಂದರೆ ಕಂಗನಾ ರಣಾವತ್. ಇವರ ಸುದ್ದಿ ಇದೀಗ ಬಿಸಿಬಿಸಿ ಚರ್ಚೆಯ ವಸ್ತು.
ಕೆಲವರು ಕಂಗನಾ ಬೆಂಬಲಕ್ಕೆ ಬಂದ್ರೆ ಮತ್ತೆ ಕೆಲವರು ಇವರ ವಿರೋಧವಿದ್ದಾರೆ. ಕೆಲವರು ಕಂಗನಾಗೆ ಸರ್ಕಾರದ ವತಿಯಿಂದ ಭದ್ರತೆ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇವರ ಸಾಹಸಕ್ಕೆ ಅಂಥದ್ದೊಂದು ಭದ್ರತೆ ಬೇಕು, ಅವರಿಗೆ ಎಲ್ಲ ರೀತಿಯ ರಕ್ಷಣೆ ಕೊಡಬೇಕು, ಅವರು ಮಾದರಿ ಹೆಣ್ಣು, ಧೈರ್ಯದ ಪ್ರತೀಕ… ಎಂದೆಲ್ಲಾ ಹಾಡಿ ಹೊಗಳುತ್ತಿದ್ದಾರೆ.
ಅದೇನೇ ಇದ್ದರೂ ಇಲ್ಲೊಬ್ಬ ಕಂಗನಾ ಫ್ಯಾನ್ ಕೆಲಸವನ್ನು ವಿರೋಧಿಸಿದ್ದಾರೆ. ಈ ಮಧ್ಯೆ ಗುಜರಾತಿನ ವ್ಯಾಪಾರಿಯೊಬ್ಬರು ಕಂಗನಾ ಬೆಂಬಲಕ್ಕೆ ನಿಂತಿದ್ದಾರೆ. ಕಂಗನಾ ಅವರ ಸಾಹಸದಿಂದ ಸ್ಫೂರ್ತಿಪಡೆದಿರುವ ವ್ಯಾಪಾರಿ ರತನ್, ಕಂಗನಾ ಹೆಸರಿನಲ್ಲಿ ಸೀರೆ ಸಿದ್ಧಪಡಿಸುತ್ತಿದ್ದಾರೆ.
ಕಂಗನಾ ಧೈರ್ಯಕ್ಕೆ ಮೆಚ್ಚಬೇಕು. ಕಂಗನಾ ಪ್ರಶ್ನೆ ಮಾಡಿರುವುದ್ರಲ್ಲಿ ಯಾವುದೇ ತಪ್ಪಿಲ್ಲ ಎಂದಿರುವ ರತನ್ ಅವರ ಸಾಹಸ ಮೆಚ್ಚುವ ಸಲುವಾಗಿ ಅವರ ಸೀರೆ ತಯಾರಿಸುತ್ತಿರುವುದಾಗಿ ಹೇಳಿದ್ದಾರೆ. ಕಂಗನಾ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದು, ಅವರ ವಿರುದ್ಧ ಹೇಳಿಕೆ ಹೇಳುತ್ತಿರುವುದು ತುಂಬಾ ವಿಷಾದಕರ ಎಂದು ರತನ್ ಹೇಳಿದ್ದಾರೆ.
ಸೀರೆ ಮೇಲೆ ಕಂಗನಾ ಫೋಟೋ ಇದೆ. ಜತೆಗೆ ಕಂಗನಾ ಮಾಡುತ್ತಿರುವುದು ಸರಿಯಿದೆ ಎಂಬ ಸಮರ್ಥನೆಯ ವಾಕ್ಯವಿದೆ. ಝಾನ್ಸಿ ರಾಣಿ. ಮಣಿಕರ್ಣಿಕಾ. ಕಂಗನಾ ನಾನು ನಿಮಗೆ ನಮಸ್ಕರಿಸುತ್ತೇವೆಂದು ಬರೆಯಲಾಗಿದೆ. ಅಂದಹಾಗೆ ಈ ಸೀರೆ ಹೆಸರು ಕಂಗನಾ ರಣಾವತ್ ಫ್ಯಾಬ್ರಿಕ್ ಸಾರಿ ಎಂದು ಹೆಸರಿಡಲಾಗಿದೆ. ಈ ಸೀರೆ ಬೆಲೆ ಒಂದು ಸಾವಿರ ರೂಪಾಯಿಯಿಂದ ಶುರುವಾಗುತ್ತದೆ.
ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸೀರೆಗೆ ಬಹಳ ಬೇಡಿಕೆ ಬಂದಿದೆ ಎನ್ನುತ್ತಿದ್ದಾರೆ ರತನ್ (ಏಜೆನ್ಸೀಸ್)