ಮಾವನೂರು, ಕಲ್ಲಹಂಗರಗಾ ಜಾತ್ರೋತ್ಸವ ರದ್ದು :ಪಿಡಿಒ ಪರಮೇಶ್ವರಯ್ಯ

0

ಜೇವರ್ಗಿ : ದೇಶದಲ್ಲಿ ಅಲ್ಲದೆ, ತಾಲೂಕಿನ ಹಳ್ಳಿಗಳಲ್ಲಿಯೂ ಸಹ ಮಹಾಮಾರಿ ಕಿಲ್ಲರ್ ಕರೋನಾ ರೋಗವು ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿರುವದರಿಂದ, ಪ್ರತಿವರ್ಷದಂತೆ ಈ ವರ್ಷ ನಡೆಯುವ ಮಾವನೂರ್ ಹಾಗೂ ಕಲ್ಲಹಂಗರಗಾ ಗ್ರಾಮದ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಪರಮೇಶ್ವರಯ್ಯ ಹೇಳಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಪರಮೇಶ್ವರಯ್ಯ ಮಾತನಾಡಿದ ಅವರು, ಬರುವ ದಿ.03 ರಂದು ಮಾವನೂರ ಗ್ರಾಮದ ಶ್ರೀ ಧರ್ಮರಾಯ ಮುತ್ಯಾ ಹಾಗೂ ದಿ.04ರಂದು ಕಲ್ಲಹಂಗರಗಾ ಗ್ರಾಮದ ಶ್ರೀ ಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವನ್ನು ಕರೋನಾ ಮಹಾಮಾರಿಯ ಸಲುವಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸರಕಾರದ ಆದೇಶದ ಪ್ರಕಾರ ರದ್ದು ಗೊಳಿಸಲಾಗಿದೆ. ಕಾರಣ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸದೆ, ತಮ್ಮ ತಮ್ಮ ಮನೆಯಲ್ಲಿ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದುಕೊಳ್ಳುವುದರ ಮೂಲಕ ಸರ್ಕಾರದ ಲಾಕಡೌನ್ ಆದೇಶ ಪಾಲಿಸಬೇಕೆಂದು ಕಲ್ಲಹಂಗರಗಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪರಮೇಶ್ವರಯ್ಯ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here