ಮಾಸ್ಕ್ ಸ್ಯಾನಿಟೈಜರ್ ಅನ್ನು ನಾವು ಬಳಸುವುದಿಲ್ಲ ಸಾಮಾಜಿಕ ಅಂತರ ಇಟ್ಟುಕೊಳ್ಳುವುದಿಲ್ಲ ಕಾಡಿನಿಂದ ನಾಡಿಗೆ ಬಂದ “ಅತಿಥಿ”ಗಳು

0

ಕಾಡಿನಿಂದ ನಾಡಿಗೆ ಬಂದ “ಅತಿಥಿ”ಗಳು…!!!

ಕೊಡಗು: ಜಿಲ್ಲೆಯ ಜನತೆಗೆ ಅರಣ್ಯ ಎಂದರೆ ಅವಿನಾಭಾವ ಸಂಬಂಧ ಹೀಗೆ ಕಾಡಿನಿಂದ ನಾಡಿಗೆ ಅಲ್ಲಿನ ಪ್ರಜೆಗಳು ಆಗಮಿಸಿ ಕೆಲವೆಡೆ ಅವಾಂತರ ನಡೆಸಿದರೆ ಮಗುವೊಂದು ಮೂಕ ರೋಧನೆಯೊಂದಿಗೆ ಕಡೆಗೂ ರಕ್ಷಿಸಲ್ಪಟ್ಟಿದೆ.

ಮರಿಯಾನೆ ರೋಧನ: ವಿರಾಜಪೇಟೆ ತಾಲ್ಲೂಕಿನ ಕುಟ್ಟ ಸಮೀಪವಿರುವ ತೈಲ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಿಂಡು ಬಂಡು ಬಿಟ್ಟಿದ್ದು ಹಲವು ದಾಂಧಲೆಗಳು ನಡೆಸುತ್ತಿದ್ದವು,ಹೀಗೆ ಕಾಡಿನತ್ತ ಮುಖ ಮಾಡಿ ಹೊರಟಿದ್ದ ಹಿಂಡು ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಚಿಕ್ಕ ಎಂಬುವವರ ಮೇಲೆ ದಾಳಿ ನಡೆಸಿದ್ದು ಚಿಕ್ಕಪುಟ್ಟ ಗಾಯದಿಂದ ಪಾರಾಗಿದ್ದಾರೆ,ಇದೇ ಹಿಂಡಿನಲ್ಲಿದ್ದ ಪುಟ್ಟ ಆನೆ ಮರಿ ಕುಶಾಲಪ್ಪ ಮತ್ತು ಲಲ್ಲು ಎಂಬುವವರಿಗೆ ಸೇರಿದ ಕಾಫಿ ತೋಟದ ನಡುವೆ ಇದ್ದ ಕಂದಕಕ್ಕೆ ಬಿದ್ದಿದೆ.ಈ ಸಂದರ್ಭ ತಾಯಿ ಆನೆ ರಕ್ಷಿಸಲು ಮುಂದಾದರೂ ವಿಫಲವಾಗಿದ್ದು ‘ಅಮ್ಮಾ ನನ್ನ ರಕ್ಷಿಸು’ ಎನ್ನುವಂತೆ ಘೀಳಿಡುತ್ತಿದ್ದ ಮರಿಯನ್ನು ಸ್ಥಳೀಯರು ರಕ್ಷಣೆ ಮಾಡಿ ಮರಿ ಇದ್ದ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲಿದ್ದ ತಾಯಿ ಆನೆಯ ಹಿಂಡಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.

ಕಾಡುಕೋಣ ಪ್ರತ್ಯಕ್ಷ: ಇನ್ನು ಕುಟ್ಟ ಗ್ರಾಮದಲ್ಲಿ ಆಗಿಂದಾಗೆ ಕಾಡುಕೋಣಗಳು ಪ್ರತ್ಯಕ್ಷವಾಗುತ್ತಿವೆ,ಕಾಡಾನೆಗಳ ಹಾವಳಿಯಿಂದ ತತ್ತರಿಸಿದ್ದ ಕಾಫಿ ಬೆಳೆಗಾರರಿಗೆ ಕಾಡುಕೋಣದಿಂದ ಮತ್ತೊಂದು ಆತಂಕ ಶುರುವಾಗಿದೆ,ಕಾಫಿ ತೋಟದಲ್ಲಿ ಸುತ್ತಮುತ್ತ ಮೇಯುತ್ತಾ ಓಡಾಡುತ್ತಿದ್ದು,ಅರಣ್ಯ ಇಲಾಖೆಗೆ ದೂರು ನೀಡಿದರು ಪ್ರಯೋಜನ ವಾಗುತ್ತಿಲ್ಲ ಎನ್ನುವುದು ಬೆಳೆಗಾರರ ಅಸಮಧಾನ.
ನವಿಲು ಮೂಟ್ಟೆ ಇದು ಸಹ ಕಂಡು ಕಂಡು ಬಂದದ್ದು ಕಾಯಮಾನಿ ಎನ್ನುವಲ್ಲಿ ಇಲ್ಲಿನ ಸುಬ್ರಮಣಿ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ನವಿಲಿನ ಮೊಟ್ಟೆಗಳು ಪತ್ತೆಯಾಗಿದೆ.ಬೆಳಗ್ಗೆ ತೋಟಕ್ಕೆ ತೆರಳಿದ ಸಂದರ್ಭ ನಾಲ್ಕು ಮೊಟ್ಟೆಗಳು ಪತ್ತೆಯಾಗಿವೆ.ಈ ಭಾಗದಲ್ಲಿ ನವಿಲುಗಳು ಸಹಜವಾಗಿಯೇ ಓಡಾಡುತ್ತಿದ್ದವು,ಆದರೆ ಇದೇ ಮೊದಲ ಭಾರಿಗೆ ಇವರ ತೋಟದಲ್ಲಿ ಮೊಟ್ಟೆ ಗೋಚರಿಸಿದೆ.

ಒಟ್ಟಿನಲ್ಲಿ ಕುಟ್ಟ ಅರಣ್ಯದಂಚಿನ ಗ್ರಾಮ,ನಾಗರಹೊಳೆಗೆ ಹೊಂದಿಕೊಂಡಂತೆ ಇರುವ ಈ ಪ್ರದೇಶದಲ್ಲಿ ಏಕಕಾಲದಲ್ಲಿ ವನ್ಯಜೀವಿಗಳು ಗೋಚರಿಸಿ ಸುದ್ದಿಯಾಗಿದೆ

LEAVE A REPLY

Please enter your comment!
Please enter your name here