‘ಮುಂಗಾರು ಮಳೆ’ ಚಿತ್ರ ಕುರಿತ ಸ್ವಾರಸ್ಯಕರ ಸಂಗತಿ ಬಹಿರಂಗ

0

ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಸಿನಿಮಾ 2006 ರಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿದ್ದರು. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಧೂಳೆಬ್ಬಿಸಿತ್ತು. ನಟ ಗಣೇಶ್ ಗೆ ಜೋಡಿಯಾಗಿ ಪೂಜಾ ಗಾಂಧಿ ನಟಿಸಿದ್ದರು.

ನಿರ್ದೇಶಕ ಯೋಗರಾಜ್ ಭಟ್ ಅವರು ಈ ಸಿನಿಮಾದ ಕಥೆಯನ್ನು ನಟ ವಿಜಯ್ ರಾಘವೇಂದ್ರ ಅವರಿಗೆ ಹೇಳುವ ನಿರೀಕ್ಷೆಯಲ್ಲಿದ್ದರಂತೆ. ಈ ಕುರಿತು ವಿಜಯ್ ರಾಘವೇಂದ್ರ‌, ಅಕುಲ್ ಬಾಲಾಜಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಆ ಸಮಯದಲ್ಲಿ ವಿಜಯ್ ರಾಘವೇಂದ್ರ ‘ಕಲ್ಲರಳಿ ಹೂವಾಗಿ’ ಶೂಟಿಂಗ್ ನಲ್ಲಿ ಇದ್ದರಂತೆ. ಹಾಗಾಗಿ ಯೋಗರಾಜ್ ಭಟ್, ನನಗೆ ಕಥೆ ಹೇಳಲೋ ಬೇಡವೋ ಎಂಬ ಗೊಂದಲದಲ್ಲಿ ಇದ್ದರಂತೆ ಎಂದು ವಿಜಯ್ ರಾಘವೇಂದ್ರ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here