ಮುಂಡ್ಕೂರು ದೊಡ್ಡಮನೆ ಬಳಿ ಪರಿಸರ ಉತ್ಸವ | ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ

0

ಮುಂಡ್ಕೂರು ದೊಡ್ಡಮನೆ ಬಳಿ ಪರಿಸರ ಉತ್ಸವ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಮುಂಡ್ಕೂರು ದೊಡ್ಡಮನೆ ಬಳಿ ನಡೆದ ಪರಿಸರ ಉತ್ಸವ ಕಾರ್ಯಕ್ರಮದಲ್ಲಿ “ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ” ಹಾಗೂ ಜವಾಬ್ದಾರಿ ಎಂದು ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ ಹೇಳಿದರು.
ಅವರು ಮುಂಡ್ಕೂರು ದೊಡ್ಡಮನೆ ಶಕುಂತಳಾ ಜಗನ್ನಾಥ ಶೆಟ್ಟಿ ದ್ವಾರದ ಬಳಿ ಕಾರ್ಕಳ ಶಾಸಕರ ವಿಭಿನ್ನ ಪರಿಕಲ್ಪನೆಯ ಪರಿಸರ ಉತ್ಸವದ ಭಾಗವಾಗಿ ಸಸಿ ವಿತರಣೆ ಹಾಗೂ ನೆಡುವಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಕಲಕರಿಯದ ವಿಜಯಾ ಯುವಕ ಸಂಘ, ಖುಷಿ ಮಹಿಳಾ ಮಂಡಲಗಳ ನೇತೃತ್ವದಲ್ಲಿ ಗೋಕುಲನಗರದ ನಾಗನಿಧಿ ಫ್ರೆಂಡ್ಸ್‌ನ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಡ್ಕೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶಶಿಕಲಾ ಸಾಲ್ಯಾನ್ ಸಸಿ ವಿತರಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಬಾಬು ಶೆಟ್ಟಿ, ಮುಂಡ್ಕೂರು ದೊಡ್ಡಮನೆ ಪ್ರಸನ್ನ ಶೆಟ್ಟಿ, ಸಾಯಿನಾಥ ಶೆಟ್ಟಿ ಗಿಡ ನೆಟ್ಟರು.

ಯುವಕ ಸಂಘದ ಅಧ್ಯಕ್ಷ ಚಂದ್ರಹಾಸ, ಮಹಿಳಾ ಮಂಡಲದ ಅಧ್ಯಕ್ಷೆ ಸ್ನೇಹಾ ಶೆಟ್ಟಿ, ಪಂಚಾಯತ್ ಮಾಜಿ ಸದಸ್ಯ ರಘು ಸಾಲ್ಯಾನ್, ಶರತ್ ಶೆಟ್ಟಿ ,ಆಶೋಕ ಶೆಟ್ಟಿ, ಸುರೇಶ್ ಭಂಡಾರಿ, ಜಯಂತ ಕುಂದರ್, ಗುಲಾಬಿ, ಬೇಬಿ ಶೆಟ್ಟಿ, ಆಶೋಕ್ ಪೂಜಾರಿ, ಸುಫಲಾ, ಉಷಾ , ಸುಗಂಧಿ ಮತ್ತಿತರಿದ್ದರು.

ವರದಿ: ಹರೀಶ್ ಸಚ್ಚೇರಿಪೇಟೆ

LEAVE A REPLY

Please enter your comment!
Please enter your name here