ಕೊರೊನಾ ಸೋಂಕು ಹರಡುವಿಕೆಯನ್ನ ತಪ್ಪಿಸುವುದಕ್ಕಾಗಿ ಲಾಕ್‌ಡೌನ್ ಹೇರಲಾಗಿತ್ತು. ಆದ್ರೆ, ದಿನಗಳು ಕಳೆದಂತೆ ಲಾಕ್‌ಡೌನ್ ತೆರವುಗೊಂಡು, ಆನ್‌ಲಾಕ್ ಮಾಡಲಾಯ್ತು. ಆನ್‌ಲಾಕ್ 3.0 ನಲ್ಲಿ ಹೊಟೇಲ್, ದೇವಸ್ಥಾನಗಳನ್ನ ಓಪನ್ ಮಾಡಲು ಅನುಮತಿ ನೀಡಿತು. ಆದ್ರೆ, ಅದ್ಯಾಕೋ ಪಬ್, ಬಾರ್, ಕ್ಲಬ್‌ಗಳಿಗೆ ಪರ್ಮಿಷನ್ ನೀಡಿರಲಿಲ್ಲ. ಆದ್ರೆ, ಮುಂದಿನ ವಾರ ಶುರುವಾಗಲಿರುವ ಆನ್‌ಲಾಕ್ 4.0 ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.
ಕೊರೊನಾ ಹೊಡೆತಕ್ಕೆ ಹೋಟೆಲ್ ಉದ್ಯಮ, ಅಬಕಾರಿ ಇಲಾಖೆ ಅದಾಯ ನೆಲಕಚ್ಚಿದ್ದು, ತೀವ್ರ ಸಂಕಟದಲ್ಲಿವೆ. ಇನ್ನ ಹೋಟೆಲ್ ತೆಗೆದರು ಆದಾಯ ಬರದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಪರಿಹಾರ ನೀಡುವಂತೆ ಸಿಎಂ ಬಿಎಸ್‌ವೈಗೆ ಮನವಿ ಸಲ್ಲಿಸಿದ್ದಾರೆ.
ಇನ್ನು ನೆಲಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಬಕಾರಿ ಸಚಿವರು, ಮುಂದಿನ ವಾರ ಅನ್‌ಲಾಕ್ 4.0 ಮಾರ್ಗಸೂಚಿ ಪ್ರಕಟವಾಗಲಿದ್ದು, ಇನ್ನೊಂದು ವಾರದಲ್ಲಿ ಪಬ್, ಬಾರ್, ಕ್ಲಬ್‌ಗಳು ಓಪನ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.