ಅಕ್ಟೋಬರ್ 08: ಕಳೆದ ಮೂರ್ನಾಲ್ಕು ದಿನಗಳಿಂದ ಸೆಕೆ ಹೆಚ್ಚಾಗಿದೆ. ಮಳೆಯೂ ಕಡಿಮೆಯಾಗಿದೆ.
ಮುಂದಿನ ಮೂರು ದಿನ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿವಹಣಾ ಕೇಂದ್ರ ನೀಡಿದೆ.ಅಕ್ಟೋಬರ್ 11 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯೊಳಗೆ ಮಳೆಯಾಗಲಿದೆ.
ಕೃಷ್ಣರಾಜಸಾಗರ, ಧರ್ಮಸ್ಥಳ, ಸುಬ್ರಹ್ಮಣ್ಯ, ಕೋಟ, ಶಿರಾಲಿ, ಹಿರೆಕೆರೂರು, ಪಾಂಡವಪುರ, ಆಲೂರಿನಲ್ಲಿ ಮಳೆಯಾಗಿದೆ.ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬೆಳಗಾವಿಯಲ್ಲಿ ಭಾರಿ ಮಳೆಯಾಗಲಿದೆ.
ದಕ್ಷಿಣ, ಕನ್ನಡ, ಉಡುಪಿ,ಉತ್ತರ ಕನ್ನಡದ ಅಲ್ಲಲ್ಲಿ ಮಳೆಯಾಗಲಿ. ಬಾಗಲಕೋಟೆಯಲ್ಲಿ ಎರಡು ದಿನ ಒಣಹವೆ ಇರಲಿದ್ದು, ಅಕ್ಟೋಬರ್ 11 ರಂದು ಮಳೆಯಾಗಲಿದೆ. ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರದಲ್ಲೂ ಅಕ್ಟೋಬರ್ 11 ರಂದು ಮಳೆಯಾಗಲಿದೆ.
ಬಳ್ಳಾರಿ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದೆ.ಬೆಂಗಳೂರಿನಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಲಬುರಗಿಯಲ್ಲಿ 34.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಬೀದರ್ನಲ್ಲಿ 17.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.