ಮುಂದಿನ 50 ವರ್ಷ ಕಾಲ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೇ ಮುಂದುವರಿಯಲಿದೆ ಹೀಗಾದ್ರೆ.: ಗುಲಾಂ ನಬಿ ಆಜಾದ್

0

ಮುಂದಿನ 50 ವರ್ಷ ಕಾಲ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೇ ಮುಂದುವರಿಯಲಿದೆ ಹೀಗಾದ್ರೆ… ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸಿದ್ದಾರೆ. ಗ್ರೂಪ್ ಆಫ್​ 23 ಯಲ್ಲಿ ಗುರುತಿಸಿಕೊಂಡ ಗುಲಾಂ ನಬಿ ಆಜಾದ್ ಪಕ್ಷ ಸಂಘಟನೆಯ ವಿಚಾರದ ಬಗ್ಗೆ ಮತ್ತೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಶಕಗಳಿಂದ ಪಕ್ಷದೊಳಗೆ ಆಂತರಿಕ ಚುನಾವಣೆಗಳು ನಡೆದಿಲ್ಲ. ಸಂಘಟನಾತ್ಮಕವಾಗಿ ಪ್ರಮುಖ ಸ್ಥಾನಗಳಿಗೆ ಚುನಾವಣೆ ನಡೆಸದೇ ಇನ್ನೂ 10-15 ವರ್ಷಗಳಿಗೆ ಮುಂದೂಡಿದರೆ, ಖಚಿತವಾಗಿ ಮುಂದಿನ ಐವತ್ತು ವರ್ಷಗಳ ಕಾಲ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿಯೇ ಮುಂದುವರಿಯಬೇಕಾಗುತ್ತದೆ ಎಂಬ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ಸ್ಥಾನದಲ್ಲೇ ಮುಂದುವರಿಯುವ ಉದ್ದೇಶವೇ ಆಗಿದ್ದಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಬದಲಾಯಿಸಬೇಕಾದ ಅವಶ್ಯಕತೆ ಇಲ್ಲ. ಆಂತರಿಕ ಚುನಾವಣೆಯನ್ನೂ ನಡೆಸಬೇಕಾಗಿಲ್ಲ. ಈ ಪತ್ರ ಬರೆದ ವಿಚಾರವಾಗಿ ನಮ್ಮ ಮೇಲೆ ವಾಗ್ದಾಳಿ ನಡೆಸುತ್ತಿರುವ ಜಿಲ್ಲಾ ಮಟ್ಟದ ನಾಯಕರು ಮತ್ತು ಇತರರು ಒಂದೊಮ್ಮೆ ಸಂಘಟನಾತ್ಮಕ ಚುನಾವಣೆ ನಡೆದರೆ ಹೇಳ ಹೆಸರಿಲ್ಲದಂತೆ ನಾಪತ್ತೆಯಾಗಿರುತ್ತಾರೆ ಎಂದು ಆಜಾದ್ ಹೇಳಿದ್ದಾರೆ.

ನಿಜವಾಗಿಯೂ ಕಾಂಗ್ರೆಸ್ ಪಕ್ಷದ ಹಿತವನ್ನು ಬಯಸುವವರು ಖಚಿತವಾಗಿಯೂ ಆ ಪತ್ರದಲ್ಲಿನ ವಿಷಯವನ್ನು ಸ್ವಾಗತಿಸುತ್ತಾರೆ. ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರನ್ನು ಪಕ್ಷದ ಕಾರ್ಯಕರ್ತರೇ ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂಬುದನ್ನು ಪ್ರತಿಪಾದಿಸುತ್ತ ಬಂದಿದ್ದೇನೆ ಎಂದವರು ಹೇಳಿದರು. (ಏಜೆನ್ಸೀಸ್)

LEAVE A REPLY

Please enter your comment!
Please enter your name here