ಮುಂಬಯಿ: 2 ಕೆಜಿ ಚರಸ್‌ ಜತೆಗೆ ಇಬ್ಬರ ಬಂಧನ

0

ಮುಂಬಯಿ ಬಳಿಯ ಭಾಯಂದರ್ ನಿಂದ 2 ಕೆಜಿ ಚರಸ್‌ ಹೊಂದಿರುವ ಇಬ್ಬರು ವ್ಯಕ್ತಿಗಳನ್ನು ಮಾದಕವಸ್ತು ನಿಯಂತ್ರಣ ದಳವು (ಎನ್‌ಸಿಬಿ) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇರೆಗೆ ಭಾಯಂದರ್‌ ಪೂರ್ವದ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಬಸ್‌ ನಿಲ್ದಾಣದ ಬಳಿ ಆರೋಪಿ ಅವಿನಾಶ್‌ ಸಿಂಗ್ ನನ್ನು (24) ಬಂಧಿಸಲಾಗಿದೆ. ಆತ ತನ್ನ ಚೀಲದಲ್ಲಿ 2.04 ಕೆಜಿ ಚರಸ್‌ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ.

ಸಿಂಗ್‌ ಬಂಧನದ ಅನಂತರ ಎನ್‌ಸಿಬಿ ತಂಡವು ನಲಸೋಪಾರದ ಮನೆಯೊಂದರ ಮೇಲೆ ದಾಳಿ ನಡೆಸಿ ಶ್ರವಣ್‌ ಗುಪ್ತಾ (38) ಎಂಬ ಇನ್ನೋರ್ವ ಆರೋಪಿಯನ್ನು ಬಂಧಿಸಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here