ಮುಂಬೈ -ಚೆನ್ನೈ ತಂಡಗಳ ಕಾದಾಟದೊಂದಿಗೆ ‘IPL’ ಟೂರ್ನಿಗೆ ಚಾಲನೆ : ಪಾಕ್ ಬಿಟ್ಟು 120 ದೇಶಗಳಲ್ಲಿ ನೇರಪ್ರಸಾರ

0

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವಿನ ಕಾದಾಟದೊಂದಿಗೆ ಶನಿವಾರ IPL ಟೂರ್ನಿಗೆ ಚಾಲನೆ ಸಿಗಲಿದೆ.

ಭಾರತ ಮಾತ್ರವಲ್ಲದೆ ವಿಶ್ವದ 120 ದೇಶಗಳಲ್ಲಿ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದ್ದು,. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಪಂದ್ಯಗಳನ್ನು ನೇರಪ್ರಸಾರ ಮಾಡುವ ಹಕ್ಕು ಪಡೆದುಕೊಂಡಿದೆ. ಇನ್ನೂ, ವಿವಿಧ ರಾಷ್ಟ್ರಗಳ ಪ್ರಸಾರ ವಾಹಿನಿಗಳ ಜತೆಗೂ ಪಂದ್ಯದ ನೇರಪ್ರಸಾರವನ್ನು ಹಂಚಿಕೊಳ್ಳಲಿದೆ. ಆದರೆ ಪಾಕಿಸ್ತಾನದಲ್ಲೇ ಈ ಬಾರಿ ಐಪಿಎಲ್ ಪಂದ್ಯಗಳು ನೇರಪ್ರಸಾರ ಕಾಣುವುದಿಲ್ಲ. ಪಾಕಿಸ್ತಾನದ ಯಾವುದೇ ಚಾನಲ್‌ಗಳು ಪಂದ್ಯದ ನೇರಪ್ರಸಾರ ಹಕ್ಕು ಪಡೆದುಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಐಪಿಎಲ್ 13ನೇ ಆವೃತ್ತಿಗೆ ಇನ್ನು ಐದು ದಿನ ಮಾತ್ರ ಬಾಕಿಯಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here