ಮುಂಬೈ ಬಿಟ್ಟ ಬೆನ್ನಲ್ಲೇ ಆದಿತ್ಯ ಠಾಕ್ರೆ ವಿರುದ್ಧ ‘ಕಂಗನಾ ರಣಾವತ್’ ಖಡಕ್ ಟ್ವೀಟ್

0

ಮುಂಬೈ: ಮುಂಬೈಯನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಆಡಳಿತಾರೂಢ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಮುಂಬೈನಲ್ಲಿರುವ ಕಂಗಾನ ಅವರ ಕಚೇರಿಯನ್ನು ಅನಧಿಕೃತ ಎಂದು ಹೇಳಿ ಮಹಾರಾಷ್ಟ್ರ ಸರ್ಕಾರ ಅದನ್ನು ನೆಲಸಮ ಮಾಡಿತ್ತು.

ಈ ವಿಚಾರವಾಗಿ ನೇರವಾಗಿಯೇ ಉದ್ಧವ್​ ಠಾಕ್ರೆಯವರಿಗೆ ಸವಾಲು ಹಾಕಿರುವ ಕಂಗನಾ ಮುಂಬೈ ಬಿಟ್ಟ ಕೆಲವೇ ಕ್ಷಣದಲ್ಲಿ ಟ್ವೀಟ್ ಮೂಲಕ ಉದ್ಧವ್​ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಬಾಲಿವುಡ್​ ಮಾಫಿಯಾ, ಸುಶಾಂತ್​ ಸಿಂಗ್​ ಸಾವು, ಡ್ರಗ್ಸ್​ ದಂಧೆ ಬಗ್ಗೆ ತುಂಬ ವಿಚಾರಗಳನ್ನು ಮಾತನಾಡುತ್ತಿರುವುದೇ ಅವರಿಗೆ ಸಮಸ್ಯೆಯಾಗಿದೆ, ನನ್ನನ್ನು ಹತ್ತಿಕ್ಕಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ. ಎಲ್ಲದರ ಜತೆ ಉದ್ಧವ್ ಪ್ರೀತಿಯ ಪುತ್ರ ಆದಿತ್ಯ ಠಾಕ್ರೆಗೆ ಸಂಪರ್ಕವಿದೆ. ಕೆಟ್ಟದ್ದನ್ನು ಎತ್ತಿ ತೋರಿಸಿದ್ದಕ್ಕೆ ಅವರೆಲ್ಲ ಸೇರಿ ನನ್ನನ್ನು ಬಾಯಿಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here