ಮುಂಬೈ ಭೇಟಿ ನೀಡಲಿರುವ ಕಂಗನಾ ರನೌತ್ ಗೆ Y ಕೆಟಗರಿ ಭದ್ರತೆ ನೀಡಿದ ಗೃಹ ಸಚಿವಾಲಯ

0

ಕಳೆದ ಕೆಲವು ವಾರಗಳಿಂದ ಮಹಾರಾಷ್ಟ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಗೃಹ ವ್ಯವಹಾರ ಸಚಿವಾಲಯ (ಎಂಎಚ್‌ಎ) ವೈ ದರ್ಜೆಯ ಭದ್ರತೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ಮುಖಂಡ ಸಂಜಯ್ ರೌತ್ ಅವರೊಂದಿಗೆ ನಡೆಯುತ್ತಿರುವ ಜಗಳದ ನಡುವೆ ಕಂಗನಾ ರನೌತ್ ಸೆಪ್ಟೆಂಬರ್ 9 ರಂದು ಮುಂಬೈಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕಂಗನಾ ರನೌತ್ ಅವರಿಗೆ ವೈ ದರ್ಜೆ ಭದ್ರತೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ವೈ ವರ್ಗ ಭದ್ರತೆಯನ್ನು ಪಡೆಯುವ ವಿಐಪಿಗಳಿಗೆ ಕಮಾಂಡೋಗಳು ಸೇರಿದಂತೆ 11 ಸಿಬ್ಬಂದಿಗಳನ್ನು ಒಳಗೊಂಡ ಭದ್ರತಾ ತಂಡ ಇರುತ್ತದೆ.

ಕಂಗನಾ ರನೌತ್ ಇತ್ತೀಚೆಗೆ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದ್ದರು, ಇದರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ಮುಖಂಡರು ಕಿಡಿ ಕಾರಿದ್ದರು. ಸಂಜಯ್ ರೌತ್ ತನ್ನ ಸ್ವಂತ ರಾಜ್ಯ ಹಿಮಾಚಲ ಪ್ರದೇಶದಿಂದ ಮುಂಬೈಗೆ ಮರಳದಂತೆ ಎಚ್ಚರಿಕೆ ನೀಡಿದ ನಂತರ ಆಕೆ ಮತ್ತು ಕುಟುಂಬ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದರು.

ಈ ಹಿಂದೆ ಹಿಮಾಚಲ ಪ್ರದೇಶ ಸರ್ಕಾರ ಕೂಡ ಕಂಗನಾ ರನೌತ್ ಗೆ ಭದ್ರತೆ ನೀಡುವುದಾಗಿ ತಿಳಿಸಿದ್ದರು.

LEAVE A REPLY

Please enter your comment!
Please enter your name here