ಮೃತದೇಹವನ್ನು ಹೊತ್ತು ದುರ್ಗಮ ಹಾದಿಯಲ್ಲಿ 8 ತಾಸು ನಡೆದ ಐಟಿಬಿಪಿ ಯೋಧರು.

0

ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸ್​ ಗಸ್ತುಪಡೆಯ ಸೈನಿಕರು ಓರ್ವನ ಮೃತ ದೇಹ ಹೊತ್ತುಕೊಂಡು ಬರೋಬ್ಬರಿ 8 ತಾಸು ನಡೆದಿದ್ದಾರೆ.

ಮೃತನ ಕುಟುಂಬಕ್ಕೆ ದೇಹವನ್ನು ಒಪ್ಪಿಸಬೇಕು ಎಂಬ ಕಾರಣಕ್ಕೆ 25 ಕಿಮೀ ದೂರ ಅದನ್ನು ಹೊತ್ತು ಕ್ರಮಿಸಿದ್ದಾರೆ. ಉತ್ತರಖಾಂಡದ ಪಿಥೋರ್​​ಗಡ್​ನ ಬಾಗ್ದಾಯರ್​ ಬಳಿಯ ಸ್ಯುನಿ ಗ್ರಾಮದಲ್ಲಿ ಕಲ್ಲುಗಳ ಸ್ಫೋಟದಿಂದ 30 ವರ್ಷದ ಯುವಕನೋರ್ವ ಮೃತಪಟ್ಟಿದ್ದ. ಅದನ್ನು ಸ್ಥಳೀಯರು ಐಟಿಬಿಪಿ ಸಿಬ್ಬಂದಿಗೆ ತಿಳಸಿದ್ದಾರೆ. ಕೂಡಲೇ ಅಲ್ಲಿಗೆ ಹೋದ ಸೈನಿಕರು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಆತ ಮುನ್ಸಿಯಾರಿ ಗ್ರಾಮದವನು ಎಂಬ ವಿಚಾರ ತಿಳಿದರೂ ಸಿಕ್ಕಾಪಟೆ ಮಳೆಯಾಗುತ್ತಿರುವ ಕಾರಣ ವಾಹನ ಸಂಚಾರ ಸಾಧ್ಯವಾಗುತ್ತಿರಲಿಲ್ಲ. ವಾಹನ ಬರುವ ದಾರಿಗಳೆಲ್ಲ ಬಂದ್​ ಆಗಿದ್ದವು. ಹೀಗಾಗಿ ಸೈನಿಕರು ಸ್ಟ್ರೆಚರ್​​​ನಲ್ಲಿ ಶವವನ್ನು ಮಲಗಿಸಿ, 25 ಕಿ.ಮೀ.ದೂರದ ಹಳ್ಳಿಗೆ ಹೋಗಿ, ಕುಟುಂಬಕ್ಕೆ ಒಪ್ಪಿಸಿದ್ದಾರೆ.

ಮುನ್ಸಿಯಾರಿಗೆ ಹೋಗುವ ದಾರಿ ತುಂಬ ದುರ್ಗಮವಾಗಿದೆ. ದಾರಿಯುದ್ಧಕ್ಕೂ ಕಲ್ಲು ಬಂಡೆಗಳು..ಕೊರಕಲು ತುಂಬಿದೆ. ಅಷ್ಟಾದರೂ ಸುಮಾರು 8 ಯೋಧರು 25 ಕಿಮೀ ನಡೆದಿದ್ದಾರೆ. (ಏಜೆನ್ಸೀಸ್)

LEAVE A REPLY

Please enter your comment!
Please enter your name here