ಮೇಡ್ ಇನ್ ಚೀನಾ: ರಾಕೆಟ್ ಲಾಂಚರ್ ಮಿಸ್ ಫೈರ್, ಸಖತ್ ಟ್ರೋಲ್ಗೆ ಗುರಿಯಾಯ್ತು ಈ ವಿಡಿಯೋ!

0

ಲಡಾಖ್ ಗಡಿ ಸಂಘರ್ಷ ಬೆನ್ನಲ್ಲೇ ಚೀನಾ ಮತ್ತು ಭಾರತ ಅಪಾರ ಪ್ರಮಾಣದಲ್ಲಿ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಜಮೆ ಮಾಡುತ್ತಿದ್ದು ತೀವ್ರ ಸಮರಾಭ್ಯಾಸದಲ್ಲಿ ತೊಡಗಿವೆ.

ಇದರ ಮಧ್ಯೆ ಚೀನಾ ಸೇನೆ ಪಿಎಲ್‌ಎ ನಡೆಸಿದ ಸಮರಾಭ್ಯಾಸದ ವಿಡಿಯೋ ಸದ್ಯ ವೈರಲ್ ಆಗಿದೆ. ಭಾರತದ ಟ್ವೀಟರಿಗರು ಈ ವಿಡಿಯೋವನ್ನು ಟ್ರೋಲ್ ಮಾಡುತ್ತಾ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ಅನ್ನು ಕಿಚಾಯಿಸುತ್ತಿದ್ದಾರೆ.

ವಿಡಿಯೋದಲ್ಲಿ ಚೀನಾದ ಸೈನಿಕನೊಬ್ಬ ಆಯಂಟಿ ರಾಕೆಟ್ ಲಾಂಚ್ ಮಾಡುವ ವೇಳೆ ಅದು ಮಿಸ್ ಫೈರ್ ಆಗಿತ್ತು.

‘ಒಮ್ಮೆ ಬಳಸಿ ಉತ್ಪನ್ನಗಳನ್ನು ಎಸೆಯಲು’ ಈ ದೇಶವು ಹೆಸರುವಾಸಿಯಾಗಿದೆ ಎಂದು ‘ಮೇಡ್ ಇನ್ ಚೀನಾ’ ಶಸ್ತ್ರಾಸ್ತ್ರವನ್ನು ಟ್ರೋಲ್ ಮಾಡುವುದನ್ನು ನೆಟಿಜನ್‌ಗಳು ಬಿಡಲಿಲ್ಲ. ಚೀನಾದ ಸೈನ್ಯವು ತಮ್ಮ ಶತ್ರುಗಳ ಮೇಲೆ ದಾಳಿ ಮಾಡಲು ‘ಚಾಕುಗಳು ಮತ್ತು ಕಡ್ಡಿಗಳನ್ನು’ ಬಳಸುವುದಕ್ಕೆ ಅವರ ಶಸ್ತ್ರಾಸ್ತ್ರಗಳು ನಂಬಲರ್ಹವಾಗಿಲ್ಲದಿರಬಹುದು ಎಂದು ಟ್ವಿಟರ್ ಬಳಕೆದಾರರೊಬ್ಬರು ಗಮನಸೆಳೆದಿದ್ದಾರೆ.

(ಏಜೆನ್ಸೀಸ್​)

LEAVE A REPLY

Please enter your comment!
Please enter your name here