ಮೊದಲ ಗಣೇಶ ಹಬ್ಬಕ್ಕೆ ಪತ್ನಿ ರೇವತಿಗೆ ಭರ್ಜರಿ ಗಿಫ್ಟ್ ಕೊಟ್ಟ ನಿಖಿಲ್!

0

ಪತ್ನಿ ರೇವತಿ ಜೊತೆ ಮೊದಲ ಗಣೇಶೋತ್ಸವ ಆಚರಿಸಿಕೊಂಡ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹೊಸ ಮನೆಯ ಗುದ್ದಲಿ ಪೂಜೆ ಮಾಡುವ ಮೂಲಕ ಪತ್ನಿ ಹೊಸ ಗಿಫ್ಟ್ ನೀಡಿದ್ದಾರೆ.

ಪತ್ನಿ ರೇವತಿ ಅವರಿಗಾಗಿ ಬೆಂಗಳೂರು ಬಳಿಯ ತಮ್ಮ ಫಾರ್ಮ್ ಹೌಸ್ ನಲ್ಲಿ ನಿಖಿಲ್ ಮನೆ ಕಟ್ಟಿಸುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಭೂಮಿ ಪೂಜೆ ಕೂಡ ನೆರವೇರಿದೆ.

ಪತ್ನಿ ರೇವತಿ ಸ್ವತಃ ಆರ್ಕಿಟೆಕ್ಟ್ ಆಗಿರುವುದರಿಂದ ಕಟ್ಟಡದ ಉಸ್ತುವಾರಿಯನ್ನು ಪತ್ನಿಗೆ ವಹಿಸಲಾಗಿದೆ. ಪುಟ್ಟ ಮನೆ ಕಟ್ಟಲಿದ್ದು, ಪರಿಸರ ಸ್ನೇಹಿ ಆಗಿರಲಿದೆ. ಸುಮಾರು ಒಂದು ವರ್ಷದೊಳಗೆ ಮನೆ ಕೆಲಸ ಪೂರ್ಣವಾಗಲಿದೆ.

ಕೋವಿಡ್ 19 ಸಂಕಷ್ಟದ ಪರಿಸ್ಥಿತಿ ಇರುವುದರಿಂದ ಮದುವೆಯಾದ ಬಳಿಕ ನಿಖಿಲ್ ಹೊರಗಡೆ ಅಷ್ಟಾಗಿ ಕಾಣಿಸಿಕೊಂಡಿಲ್ಲವಾದರೂ, ಇತ್ತೀಚೆಗೆ ಮಳೆಯಿಂದ ಹಾನಿಯಾದ ಮಡಿಕೇರಿಯ ಕೆಲವು ಪ್ರದೇಶಗಳೀಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಕಷ್ಟವನ್ನು ಆಲಿಸಿದ್ದರು.

ಉಳಿದಂತೆ ಹೆಚ್ಚಿನ ಸಮಯವನ್ನು ನಿಖಿಲ್ ಬಿಡದಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಪತ್ನಿಯ ಜೊತೆ ಕಳೆಯುತ್ತಿದ್ದಾರೆ. ಹೀಗಾಗಿ ಇದೀಗ ಅಲ್ಲಿಯೇ ತಮ್ಮ ಪತ್ನಿಗಾಗಿ ಹೊಸ ಮನೆಯೊಂದನ್ನು ಕಟ್ಟಲು ನಿಖಿಲ್ ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here