ಮೊಬೈಲ್‌ ಮೂಲಕವೇ ʼಡ್ರೈವಿಂಗ್ ಲೈಸೆನ್ಸ್ʼ ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ..?

0

ʼಡ್ರೈವಿಂಗ್ ಲೈಸೆನ್ಸ್ʼ ಪಡೆಯುವುದು ಗೋಜಟಾದ ಸಂಗತಿ ಎಂದು ಹಲವರು ಹೇಳ್ತಾರೆ. ಆದ್ರೆ, ನೀವು ಮನೆಯಲ್ಲಿಯೇ ಕುಳಿತು ಮೊಬೈಲ್‌ ಮೂಲಕ ಡಿಎಲ್‌ಗೆ ಅರ್ಜಿ ಸಲ್ಲಿಸಬೋದು. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಈ ಕೆಳಗೆ ನೀಡಿರುವ ಕ್ರಮಗಳನ್ನ ಅನುಸರಿಸಿದ್ರೆ, ನೀವು ಆರ್‌ಟಿಒ ಅಂದ್ರೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗದೆನೇ ಸುಲಭವಾಗಿ ಆನ್‌ಲೈನ್‌ನಲ್ಲಿ ಮೂಲಕ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸಬಹುದು.

* ಮೊದಲು ನೀವು ಅಧಿಕೃತ ವೆಬ್‌ಸೈಟ್‌ sarathi.parivahan.gov.in/ ಗೆ ಭೇಟಿ ನೀಡಿ.

* ನಂತ್ರ ನಿಮ್ಮ ರಾಜ್ಯವನ್ನು ಆರಿಸಿಕೊಳ್ಳಿ

* ಈಗ ಎಡಭಾಗದಲ್ಲಿ ಅಪ್ಲೈ- ಆನ್‌ಲೈನ್ ಆಯ್ಕೆಯ ಮೇಲೆ .

* ಈಗ ಹೊಸ ಚಾಲನಾ ಪರವಾನಗಿಯ ಆಯ್ಕೆ ಕಾಣಿಸುತ್ತೆ. ನೀವು ಆ ಆಯ್ಕೆಯನ್ನ ದ ತಕ್ಷಣ ‘ಮುಂದುವರಿಸು’ ಆಯ್ಕೆ ಬರುತ್ತೆ ಅದನ್ನು ಕ್ಲಿಕ್‌ ಮಾಡಿ.

* ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನ ನಮೂದಿಸಿ, ಅದಕ್ಕೆ ಒಂದು ಒಟಿಪಿ ಬರುತ್ತೆ.

* ಈಗ ಕಲಿಯುವವರ ಪರವಾನಿಗೆ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನ ನಮೂದಿಸಿ. ನಂತರ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

* ನಂತರ ನೇಮಕಾತಿ ದಿನಾಂಕವನ್ನ ಆಯ್ಕೆ ಮಾಡಿಕೊಂಡು ಶುಲ್ಕವನ್ನ ಆನ್‌ಲೈನ್‌ನಲ್ಲಿಯೇ ಪಾವತಿಸಿ.

* ಡಿಎಲ್ ಅರ್ಜಿ ಸಲ್ಲಿಸಿದ ನಂತರ ಅದನ್ನು ಪಡೆಯಲು ಆರ್‌ಟಿಒ ಕಚೇರಿಯಲ್ಲಿ ನೀವು ಚಾಲನಾ ಪರೀಕ್ಷೆಯನ್ನು ನೀಡಬೇಕು.

LEAVE A REPLY

Please enter your comment!
Please enter your name here