ಯಾರ್‌ಮಗಾ ಸಿನಿಮಾ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪಡುಕೋಟೆ ಗ್ರಾಮದಲ್ಲಿ ನಡೆಯಿತು.

0

ಯಾದಗಿರಿ :-

ಪಿಕೆ ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗುತ್ತಿರುವ ಯಾರ್‌ಮಗಾ ಸಿನಿಮಾ ಬಾ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪಡುಕೋಟೆ ಗ್ರಾಮದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸುರಪುರ ಸಂಸ್ಥಾನದ ರಾಜಾ ಲಕ್ಷ್ಮೀನಾರಾಯಣ ನಾಯಕ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಂಗರಾಜ ವನದುರ್ಗ ಇತಿಹಾಸಕಾರ ಭಾಸ್ಕರರಾವ ಮುಡಬೂಳ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಭಂಡಾರಿ ನಾಟೇಕರ್ ನಾಯಕ ನಟ ರಘು ಪಡಕೋಟೆ ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ನಾಯಕ ನಟ ರಘು ಪಡಕೋಟೆ ತಮ್ಮ 22ನೇ ಹುಟ್ಟು ಹಬ್ಬದ ಅಂಗವಾಗಿ 22 ಕೆಜಿ ಕೇಕ್ ಕಟ್ ಮಾಡುವ ಮೂಲಕ ವಿಶೇಷವಾಗಿ ಆಚರಿಸಿಕೊಂಡರು. ಅಲ್ಲದೆ ಕರ್ನಾಟಕ ರಕ್ಷಣಾ ವೇದಿಕೆಯ ಪಡುಕೋಟೆ ಘಟಕವನ್ನು ಕೂಡ ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಎಸ್ಸಿ ಸದಸ್ಯ ರಂಗರಾಜ ವನದುರ್ಗ ಮಾತನಾಡಿ, ಪಡುಕೋಟೆ ಗ್ರಾಮಕ್ಕೆ ಬಹುದೊಡ್ಡ ಇತಿಹಾಸವಿದೆ ಇದರ ಕೀರ್ತಿಯನ್ನು ಬೆಂಗಳೂರಿನವರೆಗೂ ಕೊಂಡೊಯ್ದಿರುವ ಕನ್ನಡದ ದೊಡ್ಡ ಹೋರಾಟಗಾರ ಬಸವರಾಜ ಪಡುಕೋಟೆ ತಮ್ಮ ಮಗನಿಂದ ಸಿನಿಮಾ ಮಾಡಿಸಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಿದ್ದಾರೆ ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಭಾಸ್ಕರರಾವ್ ಮುಡಬೂಳ ಮಾತನಾಡಿ,ಕೇವಲ ನಾಡು-ನುಡಿಗಾಗಿ ಮಾತ್ರ ಹೋರಾಟ ಮಾಡದೆ ಎಲ್ಲರೂ ಬಡತನ ಮತ್ತು ಭ್ರಷ್ಟಾಚಾರ ನಿರ್ಮೂಲನಗೂ ಕೂಡ ಹೋರಾಟ ಮಾಡಬೇಕು ಎಂದರು. ಅಲ್ಲದೆ ರಘು ಪಡುಕೋಟೆ ಇವತ್ತು ಯಾರ್‌ಮಗಾ ಎನ್ನುವ ಸಿನಿಮಾ ಮಾಡುತ್ತಿದ್ದಾರೆ ಚಿತ್ರ ಯಶಸ್ವಿಯಾಗಲಿ ಅದೇ ರೀತಿ ಔರಂಗಜೇಬನಿಗೆ ತೋಪು ಹೊಡೆಯುವಂಥ ಸುರಪುರ ಇತಿಹಾಸದ ಸಿನಿಮಾ ಕೂಡ ಮಾಡುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕರವೇಯ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ, ಭೀಮು ನಾಯಕ ಮಲ್ಲಿಬಾವಿ ಮತ್ತು ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ಶಹಾಪುರ ತಾಲೂಕು ಅಧ್ಯಕ್ಷ ಭೀಮು ಶಖಾಪುರ, ಮಲ್ಲಯ್ಯ ಸ್ವಾಮಿ, ಹಾಗೂ ವಾಗಣಗೇರ ಮತ್ತು ಪಡುಕೋಟೆಯ ಗ್ರಾಮದ ಮುಖಂಡರುಗಳು ಅನೇಕ ಜನ ಕನ್ನಡ ಹೋರಾಟಗಾರರು ಭಾಗವಹಿಸಿದ್ದರು.

ಬೈಟ್-1 ರಂಗರಾಜ ವನದುರ್ಗ
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ. ( ಹಳದಿ ಬಣ್ಣದ ಅಂಗಿ ಧರಿಸಿದವರು ತಲೆ ಕೂದಲು ಬಿಳಿಯಾಗಿರುವವರು)

ಬೈಟ್-2 ಬಸವರಾಜ ಪಡುಕೋಟೆ
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಸಂಚಾಲಕ ( ಮೈಕ್‌ಗಳ ಮುಂದೆ ಮಾತನಾಡಿದವರು ಹಾಗೂ ಕೊರಳಲ್ಲಿ ಕನ್ನಡದ ಶಾಲು ಹಾಕಿಕೊಂಡವರು)

LEAVE A REPLY

Please enter your comment!
Please enter your name here