ಯಾವುದೇ ಕಾರಣಕ್ಕೂ ವಿದ್ಯಾಗಮ ಯೋಜನೆ ಮೊಟಕುಗೊಳ್ಳಲ್ಲ: ಶಿಕ್ಷಣ ಸಚಿವರ ಸ್ಟಷ್ಟನೆ..!

0

 ವಿದ್ಯಾಗಮ ಒಂದು ಅತ್ಯತ್ತಮ ಯೋಜನೆ. ಈ ತರಗತಿಗಳಿಂದ ಮಕ್ಕಳಿಗೆ ಕೊರೊನಾ ಸೋಂಕು ತಗುಲಿಲ್ಲ. ಆದ್ರೆ, ಜನರು ವಿದ್ಯಾಗಮ ಯೋಜನೆಯನ್ನೇ ವೈಫಲ್ಯ ಎಂದು ಬಿಂಬಿಸಿರುವುದುವ ವಿಷಾದನೀಯ ಎಂದು ಶಿಕ್ಷಣ ಸುರೇಶ್ ಕುಮಾರ್ ಹೇಳಿದ್ದಾರೆ.

ಮಾಧ್ಯಮ ಪ್ರಕಟಣೆಯೊಂದನ್ನ ಬಿಡುಗಡೆ ಮಾಡಿರುವ ಅವ್ರು, ರಾಜ್ಯಾದ್ಯಂತ 49.34 ಲಕ್ಷ ಮಕ್ಕಳು ವಿದ್ಯಾಗಮ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇನ್ನು ಶಿಕ್ಷಕರು ತಮಗೆ ನೀಡಿದ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅದ್ರಂತೆ ವಿದ್ಯಾಗಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಸೋಂಕು ತಗುಲಿರುವುದು ಎಲ್ಲಿಯೂ ವರದಿಯಾಗಿಲ್ಲ ಎಂದಿದ್ದಾರೆ.

ಇನ್ನು ಒಂದು ತಿಂಗಳ ಹಿಂದೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸೋಂಕು ತಗುಲಿತ್ತು. ಆದ್ರೆ, ಅವರೀಗ ಸೋಂಕಿನಿಂದ ಪೂರ್ಣ ಗುಣಮುಖರಾಗಿದ್ದಾರೆ. ಇನ್ನು ಅವರಿಂದ ಬೇರೆ ಶಿಕ್ಷಕರಿಗೂ ಸೋಂಕು ತಗುಲಿಲ್ಲ. ಇನ್ನುಸೆಪ್ಟೆಂಬರ್ 22ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರ್ಯಾಂಡಮ್ ಆಗಿ ಸುಮಾರು 200 ವಿದ್ಯಾರ್ಥಿಗಳನ್ನ ತಪಾಸಣೆ ಮಾಡಲಾಯ್ತು. ಅದರಲ್ಲಿ 4 ಮಕ್ಕಳಿಗೆ ಸೋಂಕಿದೆ ಎನ್ನುವುದು ದೃಡಪಟ್ಟಿದೆ. ಆದ್ರೆ, ಈ ವಿದ್ಯಾರ್ಥಿಗಳಿಗೆ ಅದು ಶಾಲೆಯ ಆವರಣದಲ್ಲಿ ಸೋಂಕು ತಗುಲಿಲ್ಲ. ಶಿಕ್ಷಕರಿಂದ ಮಕ್ಕಳಿಗೆ ಸೋಂಕು ಹರಡಿದೆ ಎನ್ನುವ ಸುದ್ದಿ ಶುದ್ದ ಸುಳ್ಳು ಎಂದಿದ್ದಾರೆ.

ವಿದ್ಯಾಗಮ ಯೋಜನೆಯ ಕಾರಣಕ್ಕೆ ಶಿಕ್ಷಕರಿಗೆ ಕೊರೊನಾ ಸೋಂಕು ಹೊಂದಿರುವ ರೀತಿಯಲ್ಲಿ ಬಿಂಬಿಸುವುದು ನಾವು ವಿದ್ಯಾರ್ಥಿ ಸಮೂಹಕ್ಕೆ ಎಸಗುವ ಅನ್ಯಾಯ ಎಂದಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ವಿದ್ಯಾಗಮ ನಿಲ್ಲುವುದಿಲ್ಲ ಎಂದು ಸ್ಟಷ್ಟ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here