ಯೂಟ್ಯೂಬ್ ನಿಂದ ಡಿಲೀಟ್ ಆಗಿದ್ದ ಚಂದನ್ ಶೆಟ್ಟಿಯ ಕೋಲುಮಂಡೆ ಸಾಂಗ್ ಮರುಬಿಡುಗಡೆಯಾಗಿದೆ.
ಸಾಕಷ್ಟು ವಿವಾದ ಸೃಷ್ಟಿಸಿದ್ದ ಕೋಲುಮಂಡೆ ರ್ಯಾಪ್ ಸಾಂಗ್ ಹಲವಾರು ಬದಲಾವಣೆಯೊಂದಿಗೆ ಮತ್ತೆ ಮರು ಬಿಡುಗಡೆ ಮಾಡಲಾಗಿದೆ. ಆಗಸ್ಟ್ 22 ರಂದು ಯೂಟ್ಯೂಬ್ ನಲ್ಲಿ ಕೋಲುಮಂಡೆ ಸಾಂಗ್ ರಿಲೀಸ್ ಆಗಿತ್ತು. ಹಾಡು ವೈರಲ್ ಆದ ಬೆನ್ನಲ್ಲೇ ಈ ಹಾಡಿನ ವಿರುದ್ಧ ಜಾನಪದ ಕಲಾವಿದರು ಆಕ್ರೋಶ ಹೊರಹಾಕಿದ್ದರು.
ಈ ಹಾಡಿನಲ್ಲಿ ಶಿವಶರಣೆ ಸಂಕಮ್ಮನ ಪಾತ್ರದ ಬಗ್ಗೆ ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ, ಹಾಗೂ ಭಕ್ತಿಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋ ವ್ಯಕ್ತವಾಗಿತ್ತು. ಬಳಿಕ ಯೂಟ್ಯೂಬ್ ನಿಂದ ಸಾಂಗ್ ಡಿಲೀಟ್ ಮಾಡಲಾಗಿತ್ತು. ಇದೀಗ ಮರು ಬದಲಾವಣೆಯೊಂದಿಗೆ ಕೋಲುಮಂಡೆ ಹಾಡು ಮರು ಬಿಡುಗಡೆಯಾಗಿದೆ.