ಯೋಜಿತ ಆಸ್ಪತ್ರೆಯು ಕೊರೊನಾ ಚಿಕಿತ್ಸೆಗೆ ಶೀಘ್ರ ಸಿದ್ಧ!

0

ನಿಪ್ಪಾಣಿ
ಯೋಜಿತ ಆಸ್ಪತ್ರೆಯು ಕೊರೊನಾ ಚಿಕಿತ್ಸೆಗೆ ಶೀಘ್ರ ಸಿದ್ಧ!

ಯಾವುದೇ ಕಾರ್ಯ ಆರಂಭಿಸಲು ತಜ್ಞರ ಸಲಹೆ ಅತಿ ಅಗತ್ಯ. ಮುಖ್ಯವಾಗಿ ಅದು ಸೇವಾ ಕ್ಷೇತ್ರವಾಗಿದ್ದರೆ, ಅತಿ ಅಗತ್ಯ. ಆಗಲೇ ಪರಿಪೂರ್ಣತೆ ಸಾಧ್ಯ!

ನಿಪ್ಪಾಣಿಯ ಜೊಲ್ಲೆ ಉದ್ಯೋಗ ಸಮೂಹದ ಸಿ.ಬಿ.ಎಸ್.ಸಿ ಆವರಣದಲ್ಲಿ ಜೊಲ್ಲೆ ಉದ್ಯೋಗ ಸಮೂಹ, ಆಯುಷ್ಮಾನ್ ಭಾರತ್ ಹಾಗೂ ಸುವರ್ಣ ಕರ್ನಾಟಕ ಇವರ ಸಹೋಗದೊಂದಿಗೆ ಕೋರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಕೊವಿಡ್ ಆಸ್ಪತ್ರೆಯನ್ನು ಸಿಬಿಎಸ್ಇ ಶಾಲೆಯಲ್ಲಿ ಪ್ರಾರಂಭಿಸುವ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ವೈದ್ಯರ ಜೊತೆ ಸಭೆ ನಡೆಸಿದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಚಿಕಿತ್ಸೆಗಾಗಿ ಪ್ರಜೆಗಳು ಅಲೆಯಬಾರದು ಎಂಬ ಉದ್ದೇಶದಿಂದ, ನಮ್ಮ ಜೊಲ್ಲೆ ಉದ್ಯೋಗ ಸಮೂಹದ ಕೊವಿಡ್ ಆಸ್ಪತ್ರೆಯಲ್ಲಿ ಪ್ರಥಮ ಹಾಗೂ ದ್ವಿತಿಯ ಹಂತದ ಕೊವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದೆಂದು ಹೇಳಿದರು.


निपाणी
नियोजित रुग्णालय कोरोना उपचारासाठी लवकरच सुरू!

कोणतेही कार्य सुरू करण्यासाठी तज्ञांचा सल्ला आवश्यक आहे. मूलत: जर ते सेवा क्षेत्र असेल तर ते आवश्यक आहे. तेव्हाच परिपूर्णता शक्य आहे!

निपाणीच्या जोल्ले उद्योग समूहाच्या सीबीएससी आवारात जोल्ले उद्योग समूह, आयुष्मान भारत आणि सुवर्णा कर्नाटक यांच्या संयुक्त विद्यमाने कोरोना रूग्णांच्या उपचारासाठी सीबीएसई स्कूलमध्ये कोविड हॉस्पिटल सुरू करण्याबाबत डॉक्टरांशी राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी बैठक घेतली.

कोरोनाच्या संकटात उपचारासाठी नागरिकांना अडचणी येऊ नयेत या उद्देशाने, जोल्ले उद्योग समूह कोविड रुग्णालयात पहिल्या आणि दुसर्‍या टप्प्यातील कोविड रुग्णांना उपचार करण्यात येईल असे सांगितले.

LEAVE A REPLY

Please enter your comment!
Please enter your name here