ರಜೆ ನಿರಾಕರಿಸಿದ್ದಕ್ಕೆ ಎಸ್‍ಎಸ್‍ಐ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಕಾನ್‍ಸ್ಟೆಬಲ್

0

ಪೊಲೀಸ್ ಕಾನ್‍ಸ್ಟೆಬಲ್‍ವೊಬ್ಬ ರಜೆ ನೀಡಲು ನಿರಾಕರಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯ( ಎಸ್‍ಎಸ್‍ಐ) ಮೇಲೆ ಗುಂಡು ಹಾರಿಸಿ ತಾನೂ ಗುಂಡು ಹಾರಿಸಿಕೊಂಡಿರುವ ಘಟನೆ ಉತ್ತರಪ್ರದೇಶದ ಬಾದೌನ್ ಜಿಲ್ಲೆಯಲ್ಲಿ ನಡೆದಿದೆ.

ಲಲಿತ್‍ಕುಮಾರ್ ಗುಂಡು ಹಾರಿಸಿರುವ ಪೊಲೀಸ್ ಕಾನ್‍ಸ್ಟೆಬಲ್. ಗಾಯಗೊಂಡು ಗಂಭೀರ ಸ್ಥಿತಿಯಲ್ಲಿರುವ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬದೌನ್ ಜಿಲ್ಲೆಯ ಉಜಾನಿ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೆಬಲ್ ಆಗಿರುವ ಲಲತ್‍ಕುಮಾರ್ 10 ದಿನಗಳ ರಜೆಗಾಗಿ ಅರ್ಜಿ ಸಲ್ಲಿಸಿದ್ದು ಈ ವಿಚಾರವಾಗಿ ಸಬ್‍ಇನ್‍ಸ್ಪೆಕ್ಟರ್ ರಾಮ್ ಅವತಾರ್ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕುಪಿತಗೊಂಡ ಕಾನ್ ಕಾನ್‍ಸ್ಟೆಬಲ್ ತನ್ನ ಬಳಿಯಿದ್ದ ಗನ್‍ನಿಂದ ಎಸ್‍ಎಸ್‍ಐಗೆ ಗುಂಡು ಹಾರಿಸಿ ತನ್ನ ಭುಜದ ಮೇಲೂ ಗುಂಡು ಹಾರಿಸಿಕೊಂಡಿದ್ದಾನೆ.

ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಗಿ ಅಲ್ಲಿಂದ ಅವರನ್ನು ಬರೇಲಿಗೆ ಕರೆದೊಯ್ಯಲಾಗಿದೆ. ಇಬ್ಬರಿಗೂ ಪ್ರಜ್ಞೆ ಬಂದಿದೆ. ಆದರೆ ಎಸ್‍ಎಸ್‍ಐ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹಿರಿಯ ಸಬ್‍ಇನ್ಸ್‍ಪೆಕ್ಟರ್ ರಾಮ್ ಅವತಾರ್ ಹೇಳಿದ್ದಾರೆ.

ಕೊಟ್ವಾಲಿಯ ಉಜಾನಿ ಪೊಲೀಸ್ ಠಾಣೆಯ ಎಸ್‍ಎಂಒ ಓಮ್ಕರ್ ಸಿಂಗ್ ಅವರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ರಜೆಯಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ಎಸ್‍ಎಸ್‍ಐ ರಾಮ್ ಅವತಾರ್ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here