ಫ್ರಾನ್ಸ್ನಿಂದ ಇತ್ತೀಚೆಗಷ್ಟೇ ಬಂದು ಭಾರತೀಯ ವಾಯು ಪಡೆ ಸೇರ್ಪಡೆಗೊಂಡಿರುವ ರಫೇಲ್ ಜೆಟ್ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ.
ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದದಂತೆ ಮೊದಲ ಹಂತದಲ್ಲಿ ಒಟ್ಟು 5 ರಫೇಲ್ ಯುದ್ಧ ವಿಮಾನಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿವೆ. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಲ್ಯಾಂಡ್ ಆಗಿರುವ ಜೆಟ್ಗಳು ತಾಲೀಮಿನಲ್ಲಿ ನಿರತವಾಗಿವೆ.
ಇದೀಗ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿರುವ ರಫೇಲ್ ಜೆಟ್ಗಳನ್ನು ಸ್ಫೋಟಿಸುವುದಾಗಿ ಶುಕ್ರವಾರ ಪತ್ರ ಬಂದಿದೆ. ಈ ಪತ್ರ ನೋಡಿದರೆ ಯಾರೋ ಕಿಡಿಗೇಡಿಗಳು ಕಳಿಸಿದ್ದೆಂದು ಭಾಸವಾಗುತ್ತಿದೆ. ಸ್ಥಳೀಯ ಆಡಳಿತ ದೂರು ನೀಡಿದ್ದು, ಸದ್ಯ ಅಂಬಾಲ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಬಾಲ ವಾಯುನೆಲೆ ಸುತ್ತಲೂ ಹಳ್ಳಿಗಳು ಇದ್ದು, ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯೂ ಇದೆ