ರಸ್ತೆಯಲ್ಲಿ ಸಿಕ್ಕಿದ ಚಿನ್ನ ವಾಪಸ್​​ ಕೊಟ್ಟು ಪ್ರಾಮಾಣಿಕತೆ ಮೆರೆದ ಯುವಕ

0

ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಸಿಕ್ಕಿದ ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರದ ಗಟ್ಟಿಯನ್ನು ಹಿಂತಿರುಗಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಪ್ರಭಾಕರ್ ಪ್ರಭು ಎಂಬುವರು ಮಂಗಳೂರಿನ ಅಡ್ಯಾರ್​​​ನ ಸಹ್ಯಾದ್ರಿ ಕಾಲೇಜಿನ ಬಳಿ ವಾಹನದಲ್ಲಿ ಬರುತ್ತಿದ್ದಾಗ ಒಂದು ಪರ್ಸ್ ಸಿಕ್ಕಿದೆ, ಈ ವೇಳೆಯಲ್ಲಿ ಅದರಲ್ಲಿರುವ ವಸ್ತುವನ್ನು ಗಮನಿಸಿ ಬಂಗಾರದ ಗಟ್ಟಿ ಇರುವ ಪರ್ಸ್ ಸಿಕ್ಕಿರುವ ಬಗ್ಗೆ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ಬಳಿ ತಿಳಿಸಿದ್ದರು.

ಕೂಡಲೇ ಸಕ ವೇದವ್ಯಾಸ ಕಾಮತ್ ಅವರ ಸಲಹೆಯಂತೆ ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕರಾಗಿರುವ ರವೀಂದ್ರ ನಿಕ್ಕಂ ಅವರಲ್ಲಿ ವಿಚಾರ ತಿಳಿಸಿದ್ದು, ಅವರು ತಮ್ಮ ಆಪ್ತರ ವಲಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಅದು ಅಡ್ಯಾರ್ ಬಳಿಯ ನಿವಾಸಿ ಕೃಷ್ಣ ಆಚಾರ್ ಅವರಿಗೆ ಸೇರಿದ್ದು ಅಂಥ ತಿಳಿಸಿದ್ದಾರೆ. ಇನ್ನು ಇದೇ ವೇಳೇ ಇಂದು ಮಂಗಳೂರಿನ ಜೋಡು ಮಠ ರಸ್ತೆಯಲ್ಲಿರುವ ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಮತ್ ಅವರ ನೇತೃತ್ವದಲ್ಲಿ ರವೀಂದ್ರ ನಿಕ್ಕಂ ಅವರ ಉಪಸ್ಥಿತಿಯಲ್ಲಿ ಪ್ರಭಾಕರ್ ಪ್ರಭು ಅವರು ಕೃಷ್ಣ ಆಚಾರ್ ಅವರಿಗೆ ಬಂಗಾರವನ್ನು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here