ರಸ್ಥೆ ನಿಮಾ೯ಣಕ್ಕಾಗಿ ಸಂಸದರಿಗೆ ಕೂಡ್ಲಿಗಿ ಪಪಂ ಸದಸ್ಯ ಬಾಸುನಾಯ್ಕ ಮನವಿ

0

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ವ್ಯಾಪ್ತಿಯ ಗ್ರಾಮ ಗೋವಿಂದಗಿರಿ ತಾಂಡ,ಪಟ್ಟಣಕ್ಕೂ ತಾಂಡಕ್ಕೂ ಸಂಪಕ೯ ಕಲ್ಪಿಸುವ ಒಳ ಕಾಲುಹಾದಿ ಶ್ರೀಗುಳೇಲಕ್ಕಮ್ಮ ದೇವಿ ರಸ್ಥೆಯನ್ನು ಅಭಿವೃದ್ಧಿಪಡಿಸಿ ನೂತನ ರಸ್ಥೆ ನಿಮಿ೯ಸಲು ಕ್ರಮಕೈಗೊಳ್ಳಬೇಕೆಂದು, ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಸದಸ್ಯ ಬಾಸುನಾಯ್ಕ ಆ8ರಂದು,ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪರವರಿಗೆ ಮನವಿ ಮಾಡಿದ್ದಾರೆ.ಕೂಡ್ಲಿಗಿ ಪಪಂ ವ್ಯಾಪ್ತಿ 20ನೇವಾಡ್೯ ಗೋಂವಿದಗಿರಿ ತಾಂಡ ದಲ್ಲಿರುವ ಶ್ರೀಗುಳೇಲಕ್ಕಮ್ಮ ದೇವಿಯ ಉತ್ಸವ ಮೂತಿ೯,ಕೂಡ್ಲಿಗಿ ಪಟ್ಟದ 10ನೇ ವಾಡ್೯ನಲ್ಲಿರುವ ತನ್ನದೇ ಆದ ದೇವಸ್ಥಾನದಲ್ಲಿರುತ್ತದೆ.ಮೂಲ ಮೂತಿ೯ ಪಟ್ಟಣದಿಂದ ಶ್ರೀಗುಳೇಲಕ್ಕಮ್ಮ ರಸ್ಥೆ ಎಂದೇ ಗುರುತಿಸಿಕೊಂಡಿರುವ ಕಾಲುಹಾದಿ,ಪಟ್ಟಣದಿಂದ ತ‍ಂಡಕ್ಕೆ ಸುಮಾರು 2ಕಿಮೀ ಅಂತರವಿದೆ.ಇದು ತಲೆತಲಾಂತರದಿಂದ ಇದ್ದು,ಶ್ರೀದೇವಿಗೆ ಅಸಂಖ್ಯಾತ ಭಕ್ತರಿದ್ದಾರೆ ತಾಂಡಾ ನೆರೆ ಹೊರೆ ಗ್ರಾಮಗಳ ಹಾಗೂ ಕೂಡ್ಲಿಗಿ ಪಟ್ಟಣದಲ್ಲಿ ಮತ್ತು ವಿವಿದ ಪಟ್ಟಣಗಳಲ್ಲಿ,ಜಿಲ್ಲೆಯಾಧ್ಯಂತ ದೇವಿಯ ಭಕ್ತರ ಮಹಾಪೂರವೇ ಇದೆ.ಈ ರಸ್ಥೆಯಲ್ಲಿ ಶಾಲಾ ಕಾಲೇಜುಗಳಿವೆ,ಹೊಲಗಳಿದ್ದುರೈತರು, ಮಹಿಳೆಯರು,ವಿಕಲಚೇತನರು ಪಾದಾಚಾರಿಗಳಾಗಿ ಹಾಗೂ ವಾಹನಗಳಲ್ಲಿ,ಪಟ್ಟಣ ಹಾಗೂ ತಾಂಡದ ನಡುವೆ ಸಾವಿರಾರು ಜನ ನಿತ್ಯ ಸಂಚಾರ ಮಾಡುವ ರಸ್ಥೆ ಇದಾಗಿದೆ.ಸಧ್ಯ ಸಂಪಕ೯ ಕಲ್ಪಿಸುವ ಮುಖ್ಯ ರಸ್ಥೆಯು ಪಟ್ಟಣದಿಂದ ಸುಮಾರು 6ಕಿಮೀ ಅಂತರದಲ್ಲಿದೆ.ಕಾರಣ ಸಧ್ಯ ಗೋವಿಂದಗಿರಿ ಗ್ರಾಮಕ್ಕೆ ಕಾಲ್ನಡಿಗೆ ಇರುವ 2ಕಿಮೀ ರಸ್ಥೆಯನ್ನೇ ಅಭಿವೃದ್ಧಿ ಪಡಿಸಬೇಕು,ತ‍ಾಂಡದ ಹೊರಭಾಗದಲ್ಲಿ ಮಾಗ೯ದ ನಡುವೆ ಹಳ್ಳವಿದ್ದು ಸೇತುವೆ ನಿಮಿ೯ಸಬೇಕೆಂದು,ಪಟ್ಟಣದ ನಾಗರೀಕರು ಹಾಗೂ ತಾಂಡ ಗ್ರಾಮಸ್ಥರ ಪರವಾಗಿ,ಪಪಂ ಸದಸ್ಯ ಬಾಸುನಾಯ್ಕರವರು ಸಂಸದರಾದ ವೈ.ದೇವೇಂದ್ರಪ್ಪರವರಿಗೆ ಮನವಿ ಮಾಡಿದ್ದಾರೆ.ಅರಸಿಕೇರಿಯ ಸಂಸದರ ನಿವಾಸದಲ್ಲಿ ಅವರನ್ನು ಬೆಟ್ಟಿಯಾಗಿ ಮನವಿ ಪತ್ರ ನೀಡಿದ್ದಾರೆ,ಈ ಸಂದಭ೯ದಲ್ಲಿ ತಾಂಡದ ಈಶ್ವರನಾಯ್ಕ,ಗೋವಿಂದನಾಯ್ಕ,ದೇವೆಂದ್ರನಾಯ್ಕ,ಚಾಲಕ ಸಂಜು ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here