ರಸ ಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮನವಿ…

0

ರಸ ಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮನವಿ…

ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲಾ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಸರಿಯಾದ ರೀತಿಯಲ್ಲಿ ರೈತರಿಗೆ ದೊರೆಯುತ್ತಿಲ್ಲ ಎಂದು ಆರೋಪಿಸಿ ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ ಮನವಿ ಸಲ್ಲಿಸಿದರು.

 

ಮನವಿ ಸಲ್ಲಿಸಿ ಮಾತನಾಡಿದ ನಿಂಗಣ್ಣ ಬಾಚಿಮಟ್ಟಿ, ಈಗ ರೈತರಿಗೆ ಅವಶ್ಯವಾಗಿ ಯೂರಿಯಾ ರಸಗೊಬ್ಬರ ಬೇಕಾಗಿದೆ ಆದರೆ ಗೊಬ್ಬರ ಮಾರಾಟಗಾರರು ರಸಗೊಬ್ಬರ ಅಭಾವ ಇದೆ ಎಂದು ನೆಪ ಹೇಳಿ 280 ರೂಪಾಯಿ ರಸೀದಿ ನೀಡಿ 450 ರಿಂದ 500 ರೂಪಾಯಿಗಳನ್ನು ಪಡೆದುಕೊಂಡು ಒಂದು ಚೀಲ ಗೊಬ್ಬರ ನೀಡುತ್ತಿದ್ದಾರೆ. ಗೊಬ್ಬರ ಮಾರಾಟಗಾರರು ಹಗಲು ದರೋಡೆ ನಡೆಸಿದ್ದು ಇದರಿಂದ ಈಗಾಗಲೇ ಅನೇಕ ಸಮಸ್ಯೆಗಳಿಂದ ನಲುಗಿಹೋಗಿರುವ ರೈತರಿಗೆ ಗೊಬ್ಬರ ಖರೀದಿ ವಿಷಯದಲ್ಲಿ ವಂಚನೆ ಮಾಡುತ್ತಿರುವ ಗೊಬ್ಬರ ಮಾರಾಟ ಅಂಗಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮಾಜಿ ಶಾಸಕರಾದ ರಾಜ ವೆಂಕಟಪ್ಪ ನಾಯಕ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು
ನಂತರ ಸಹಾಯಕ ಕೃಷಿ ನಿರ್ದೇಶಕ ಭೀಮರಾಯ ಹವಾಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಲ್ಲಣ್ಣ ಹುಬ್ಬಳ್ಳಿ ಶಬ್ಬೀರ್ ಕನ್ನೆಳ್ಳಿ ಬಸವರಾಜ ದೀವಳಗುಡ್ಡ ಮಲ್ಲು ದಂಡಿನ್ ಆದಪ್ಪ ಕೆಂಗುರಿ ಸೇರಿದಂತೆ ಅನೇಕರಿದ್ದರು.

 

LEAVE A REPLY

Please enter your comment!
Please enter your name here