ರಾಜಕಾಲುವೇ ಬಗ್ಗೆ ವಿವಾದ…!

0

ರಾಜಕಾಲುವೆ ಒತ್ತುವರಿ ಮಾಡಲು ಹಾಗೂ ಮಣ್ಣು ಹಾಕಿ ಸಮಾ ಮಾಡಲು ನಗರದ ಎಸ್‍ಜೆವಿಪಿ ಕಾಲೇಜು ಅಡಳಿತ ಮಂಡಳಿ ವತಿಯಿಂದ ಕೆಲಸ ನಡೆಸುತ್ತಿರುವ ಸಮಯದಲ್ಲಿ ನಗರ ಸಭೆ ಸದಸ್ಯರು ಹಾಗೂ ಅಧಿಕಾರಿಗಳು ಕೆಲಸ ತಡೆ ಹಿಡುದ್ದು ಜಾಗ ಅಳತೆ ಮಾಡಿದ ನಂತರ ನಿಮ್ಮಗೆ ಸಂಭದ ಪಟ್ಟರೆ ಕೆಲಸ ಪ್ರಾರಂಭ ಮಾಡಿ ಇದ್ದು ರಾಜ ಕಾಲವೆ ಜಾಗ ಇದ್ದು ನಿಮ್ಮಗೆ ಸಂಭದ ವಿಲ್ಲ ನಿಇವು ಈ ರಾಜ ಕಾಲವೆಯನ್ನು ಮುಚ್ಚಿದರೆ ಜನರಿಗೆ ಬಹಳ ದೊಡ್ಡ ಪ್ರಮಾಣದ ಸಮಸ್ಯವಾಗುತ್ತಿದೆ ಎಂದು ನಗರಸಭೆ ಸದಸ್ಯ ವಸಂತ ಕುಮಾರ ಆಕ್ರೋಶ ವೆಕ್ತ ಪಡಿಸಿದರು.

ಈ ವೇಳೆಯಲ್ಲಿ ಮಾತನಾಡಿದ ಅವರು ಒತ್ತುವರಿಯೇ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಬಹುತೇಕ ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆಗಾಲದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ತಂದೊಡ್ಡುತ್ತಿದೆ ರಾಜಕಾಲುವೆಗಳ ಒತ್ತುವರಿಯಿಂದಾಗಿ ಹಲವು ಸಮಸ್ಯೆಗಳು ತಲೆ ಎತ್ತಲಿವೆ. ಬರುವ ಮಳೆ ನೀರು ಸರಾಗವಾಗಿ ಹೋಗಲು ಆಗುತ್ತಿಲ್ಲ. ರಾಜಕಾಲುವೆಯನ್ನು ಕಿರಿದು ಮಾಡಿರುವುದರಿಂದ ತಗ್ಗು ಪ್ರದೇಶಗಳಿಗೆ, ರಸ್ತೆಗೆ ನೀರು ನುಗ್ಗಲಿದೆ. ಇದರಿಂದ ಕೆಸರು, ಕಡ್ಡಿ, ಕಸ, ಪ್ಲಾಸ್ಟಿಕ್, ಹಳೆ ಚಪ್ಪಲಿ ಮತ್ತಿತರ ಕಲ್ಮಶಗಳು ತಗ್ಗು ಪ್ರದೇಶದ ಮನೆಗಳಿಗೆ ಹರಿದು ಬರುತ್ತಿವೆ.ಎಂದು ಹೇಳಿದರು.

ನಂತರ ನಗರಸಭೆ ಸದಸ್ಯ ಮಹಬುಬ ಬಾಷ ಮಾತನಾಡಿ ರಾಜಕಾಲುವೆಗಳ ಎಡ ಮತ್ತು ಬಲ ಭಾಗದಲ್ಲಿ ಕೊಳಚೆಪ್ರದೇಶಗಳು ಸೃಷ್ಟಿಯಾಗಿವೆ. ರಾಜಕಾಲುವೆ 20 ಅಡಿಗಿಂತ ಹೆಚ್ಚು ಅಗಲ ಇರಬೇಕಾಗಿತ್ತು. ಆದರೆ ಒಂದೊಂದು ಜಾಗದಲ್ಲಿ 3-4 ಅಡಿಗಳಾಗಿವೆ. ನಗರದಲ್ಲಿ ಅನೇಕ ಕುಟುಂಬಗಳು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಜನರು ಯಾವುದೇ ಮೂಲ ಸೌಕರ್ಯಗಳಿಲ್ಲದೇ ಬದುಕುತ್ತಿದ್ದಾರೆ. ಜೋರು ಮಳೆ ಬಂದಾಗ ಇವರ ಪರಿಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.ಎಂದು ಹೇಳಿದರು.

ನಂತರ ಎಂ.ಎಸ್ ಬಾಬುಲಾಲ ಮಾತನಾಡಿ ಬೆಂಕಿನಗರ ಕಾಳಿದಾಸ ನಗರ ಪ್ರಶಾಂತ ನಗರ ಭಾರತ ಆಯಿಲ್ ಮಿಲ್ ಕಾಂಪೌಂಡ ಬಡಾವಣೆ ಸೇರಿ ಮತ್ತಿತರ ಕೊಳಚೆಪ್ರದೇಶಗಳ ನಿವಾಸಿಗಳು ಮಳೆಗಾಲದಲ್ಲಿ ಪಡುವ ಪರಿಪಾಟಲು ಯಾರಿಗೂ ಬೇಡ. ಇದು ರಾಜಕಾಲುವೆಗಳ ಒತ್ತುವರಿ ಸಮಸ್ಯೆಯಾದರೆ, ರಸ್ತೆ ಒತ್ತುವರಿ, ಚರಂಡಿಗಳ ಒತ್ತುವರಿಯಿಂದಾಗಿ ಅಶುದ್ಧ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಮಳೆಗಾಲದಲ್ಲಂತೂ ಮಳೆ ನೀರು ಸಿಕ್ಕ ಸಿಕ್ಕ ಕಡೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.ಎಂದು ಹೇಳಿದರು.

ರಸ್ತೆ ಮತ್ತು ಚರಂಡಿಗಳನ್ನು ಒತ್ತುವರಿ ಮಾಡಿರುವುದರಿಂದ ಚರಂಡಿಯಲ್ಲಿ ಕಸ ತೆಗೆದು ಸ್ವಚ್ಛಗೊಳಿಸುವುದು ಅಸಾಧ್ಯವಾಗಿದೆ. ಇದರ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಜತೆಗೆ ಪಕ್ಕದಲ್ಲಿನ ಮಣ್ಣು ಸಹ ರಸ್ತೆಗೆ ಜರುಗಿ ಬಂದು ಜನರು ತೊಂದರೆ ಅನುಭವಿಸುವಂತಾಗಿದೆ.ಎಂದು ನಗರ ಸಭೆ ಸದಸ್ಯ ಆರ.ಸಿ.ಜಾವೀದ್ ಹೇಳಿದರು.

ಇದ್ದೂ ಇಲ್ಲದಂತಿರುವ ಬಾಕ್ಸ್ ಚರಂಡಿ: ತಗ್ಗು, ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ವಾಹನಗಳನ್ನು ಓಡಿಸಲು ಪ್ರಯಾಸಪಡಬೇಕಾಗಿದೆ. ನಗರದ ಬಹುತೇಕ ತಗ್ಗು ಪ್ರದೇಶಗಳ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಓಡಾಟಕ್ಕೆ ಸಮಸ್ಯೆ ಉಂಟಾಗಿದೆ. ನಗರದ ಹೊರ ವಲಯದ ಬಾಕ್ಸ್ ಚರಂಡಿ ನಿರ್ಮಿಸಲಾಗಿದ್ದರೂ ಮಳೆ ನೀರು ಚರಂಡಿ ಸೇರುತ್ತಿಲ್ಲ. ಏಕೆಂದರೆ ಬಾಕ್ಸ್ ಚರಂಡಿ ಸಂಪೂರ್ಣ ಕಸ, ಕಡ್ಡಿ, ಮರಳು, ಘನ ತ್ಯಾಜ್ಯದಿಂದ ಮುಚ್ಚಿ ಹೋಗಿದೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬರುವ ಮಳೆ ನೀರು ಹೊರ ಹೋಗಲು ಎಲ್ಲೂ ಸ್ಥಳಾವಕಾಶ ಇಲ್ಲದೆ ಇರುವುದರಿಂದ ತಗ್ಗುಪ್ರದೇಶಕ್ಕೆ ನುಗ್ಗಿ ಸಾಕಷ್ಟು ನಷ್ಟ ಉಂಟು ಮಾಡುತ್ತಿದೆ. ಇಲ್ಲಿನ ಬಹುತೇಕ ಚರಂಡಿಗಳು ಮುಚ್ಚಿ ಹೋಗಿ ರಸ್ತೆಯ ಮೇಲೆ ಮಳೆ ನೀರು ತುಂಬಿರುತ್ತದೆ. ನಗರದ ಮುಖ್ಯ ರಸ್ತೆಯಲ್ಲೂ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆ ತುಂಬೆಲ್ಲ ನೀರು ನಿಲ್ಲುತ್ತದೆ. ಶಿವಮೊಗ್ಗ ರಸ್ತೆಯ ಸಮೀಪದ ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ಆ ರಾಜಕಾಲುವೆಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಬೇಕಿದೆ.

ಈ ಸಮಯದಲ್ಲಿ ತಹಶಿಲ್ದಾರ ಕೆ.ಬಿ.ರಾಮಚಂದ್ರಪ್ಪ, ನಗರಸಭೆ ಪೌರಯುಕ್ತರು ಸ್ಥಳಕ್ಕೆ ಧಾವಿಸಿ ಪರಿಶಿಲಿಸಿ ನಂತರ ಕಾಲೇಜು ಅಡಳಿತ ಮಂಡಳಿಯ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ ಜೊತೆ ಮಾತನಾಡಿ ನಿಮ್ಮಗೆ ಸೇರಿರುವ 16 ಎಕ್ಕರೆ ಭೂಮಿ ನಿಮ್ಮ ಸ್ವಾಧೀನದಲ್ಲಿದೆ ನಿವು ಸರ್ವೆ ಮಾಡಿದ ನಂತೆ ನಿವು ಇಲ್ಲಿ ಕೆಲಸ ಮಾಡಿಸಿ ಅಲಿಯವರೇಗೂ ಯಾವೂದೇ ಕೆಲಸಗಳನ್ನು ಮಾಡುವಂತಿಲ್ಲ ಎಂದು ಸೂಚಿಸಿದರು

LEAVE A REPLY

Please enter your comment!
Please enter your name here